ಅತಿಯಾದ ತೂಕದ ಜೊತೆ ಉಸಿರಾಟದ ಸಮಸ್ಯೆಯೂ ಕಾಡ್ತಾ ಇದ್ಯಾ, ಕಾರಣ ಹೀಗಿರಬಹುದು
By Reshma Sep 22, 2024
Hindustan Times Kannada
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದಾಗಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾರೆ. ದೈಹಿಕ ಚಟುವಟಿಕೆಯ ಕೊರತೆಯು ಸ್ಥೂಲಕಾಯ ಸಮಸ್ಯೆ ಹೆಚ್ಚಲು ಕಾರಣವಾಗಿದೆ
ಅನಾರೋಗ್ಯಕರ ಆಹಾರಪದ್ಧತಿಯಿಂದ ತೂಕ ಹೆಚ್ಚಳ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಸ್ಥೂಲಕಾಯವು ಇಲ್ಲದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ
ಅತಿಯಾದ ತೂಕದಿಂದ ಜನರು ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ದೇಹದಲ್ಲಿ ಆಮ್ಲಜನಕದ ಕೊರತೆಯು ನಿಶಕ್ತಿ, ಸುಸ್ತಿಗೆ ಕಾರಣವಾಗುತ್ತಿದೆ
ಸ್ಥೂಲಕಾಯದಿಂದಾಗುವ ಉಸಿರಾಟದ ಸಮಸ್ಯೆಯು ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ
ಹಾಗಾದರೆ ಅತಿಯಾದ ಬೊಜ್ಜಿನಿಂದ ಉಸಿರಾಟದ ಸಮಸ್ಯೆ ಎದುರಾಗುವುದು ಏಕೆ?
ಸ್ಥೂಲಕಾಯತೆಯಿಂದ ಉಸಿರಾಟದ ಸಮಸ್ಯೆ ಅನೇಕ ಕಾರಣಗಳಿಂದ ಉಂಟಾಗುತ್ತವೆ. ಇದರ ಹಿಂದಿನ ಪ್ರಮುಖ ಕಾರಣ ಸ್ಲೀಪ್ ಅಪ್ನೀಯ
ಸ್ಥೂಲಕಾಯವು ವ್ಯಕ್ತಿಯ ಶ್ವಾಸಕೋಶದ ಹಿಗ್ಗುವಿಕೆ ಮತ್ತು ಸಂಕೋಚನದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಉಸಿರಾಟ ತೊಂದರೆ ಎದುರಾಗುತ್ತದೆ
ಸ್ಥೂಲಕಾಯವು ವ್ಯಕ್ತಿಯ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಲುತ್ತದೆ. ಇದು ಡಯಾಫ್ರಮ್ ಅನ್ನು ಮೇಲಕ್ಕೆ ತಳ್ಳುತ್ತದೆ. ಡಯಾಫ್ರಮ್ನ ಅತಿಯಾದ ವಿಸ್ತರಣೆಯ ಶ್ವಾಸಕೋಶದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಕೂಡ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ
ಸ್ಥೂಲಕಾಯ ಸಮಸ್ಯೆಯಿಂದ ಚಯಾಪಚಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ದೇಹಕ್ಕೆ ಹೆಚ್ಚಿ ಆಮ್ಲಜನಕ ಅವಶ್ಯಕತೆ ಬೀಳಬಹುದು. ಇದು ಉಸಿರಾಟದ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಹಾಕುತ್ತದೆ
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ