ಈ ಸಮಸ್ಯೆ ಇರುವವರಿಗೆ ಹಾಗಲಕಾಯಿ ಅಪಾಯಕಾರಿ, ತಪ್ಪಿಯೂ ತಿನ್ಬೇಡಿ
By Reshma
Sep 23, 2024
Hindustan Times
Kannada
ಹಾಗಲಕಾಯಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ
ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಹಾಗಲಕಾಯಿ ತಿನ್ನಬಾರದು. ಇದರಿಂದ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು
ತಜ್ಞರ ಪ್ರಕಾರ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವವರು ಹಾಗಲಕಾಯಿ ತಿನ್ನುವುದು ಒಳ್ಳೆಯದಲ್ಲ
ಹಾಗಲಕಾಯಿಯಲ್ಲಿರುವ ಲೆಕ್ಟಿನ್ ಅಂಶ ಲಿವರ್‌ಗೆ ಹಾನಿ ಮಾಡುವ ಸಾಧ್ಯತೆ ಇದೆ. ಲಿವರ್ ಸಮಸ್ಯೆ ಇರುವವರು ಹಾಗಲಕಾಯಿ ತಿನ್ನದೇ ಇರುವುದು ಉತ್ತಮ
ಕೆಲವರಿಗೆ ಹಾಗಲಕಾಯಿ ಸೇವಿಸದ ನಂತರ ಅಲರ್ಜಿ ಉಂಟಾಗುತ್ತದೆ. ಅಂತಹವರು ಹಾಗಲಕಾಯಿ ತಿನ್ನಬಾರದು
ಆರೋಗ್ಯ ತಜ್ಞರ ಪ್ರಕಾರ ನೀವು ಯಾವುದೇ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರೆ ಹಾಗಲಕಾಯಿ ತಿನ್ನದೇ ಇರುವುದು ಉತ್ತಮ
ತಜ್ಞರ ಪ್ರಕಾರ ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಹಾಗಲಕಾಯಿ ತಿನ್ನಬಾರದು. ತಿನ್ನುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ
ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಇರುವವರು ಕೂಡ ಹಾಗಲಕಾಯಿ ತಿನ್ನದೇ ಇರುವುದು ಉತ್ತಮ
ಹಾಗಲಕಾಯಿ ಹೆಚ್ಚುವುದು ತಿನ್ನುವುದರಿಂದ ಮಲಬದ್ಧತೆ, ಅರ್ಜೀಣದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು
ಹಾಗಲಕಾಯಿ ಹೆಚ್ಚು ತಿಂದ್ರೆ ವಾಂತಿ, ವಾಕರಿಗೆ ಸಮಸ್ಯೆ ಎದುರಾಗಬಹುದು
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ