ಮೈಂಡ್ ಫ್ರೆಶ್ ಆಗುತ್ತೆ ಅಂತ ಅತಿಯಾಗಿ ಕಾಫಿ ಕುಡಿದ್ರೆ ಅಪಾಯ ತಪ್ಪಿದ್ದಲ್ಲ 

By Reshma
Sep 15, 2024

Hindustan Times
Kannada

ಕಾಫಿಯಲ್ಲಿ ಕೆಫಿನ್ ಅಂಶ ಹೆಚ್ಚಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಕೆಫಿನ್ ಆರೋಗ್ಯಕ್ಕೆ ಹಾನಿಕರ

ಹಾಗಾಗಿ ಅತಿಯಾಗಿ ಕೆಫಿನ್ ಸೇವಿಸುವುದರಿಂದ ಆರೋಗ್ಯ ಸಂಬಂಧಿತ ಹಲವು ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಹೆಚ್ಚು ಕಾಫಿ ಕುಡಿಯಬಾರದು ಎನ್ನಲಾಗುತ್ತದೆ 

ಹೆಚ್ಚು ಕಾಫಿ ಕುಡಿಯುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳಾಗುತ್ತವೆ ನೋಡಿ

ತಜ್ಞರ ಪ್ರಕಾರ ಪ್ರತಿದಿನ ಕಾಫಿ ಕುಡಿಯುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ 

ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫಿನ್ ಅಂಶ ಇರುವುದರಿಂದ ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ 

ಪದೇ ಪದೇ ಕಾಫಿ ಕುಡಿಯುವುದರಿಂದ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ 

ಕಾಫಿ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ವಿಪರೀತ ತೂಕ ಇಳಿಕೆಯಾಗಬಹುದು 

ಕಾಫಿ ಹೆಚ್ಚು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆಯಾಗಬಹುದು 

ಕಾಫಿಯಲ್ಲಿರುವ ಕೆಫಿನ್ ಸೇವಿಸಿದಾಗ ರಕ್ತದೊತ್ತಡ ಸಮಸ್ಯೆ ಹೆಚ್ಚಬಹುದು. ಇದು ಹೃದಯದ ಸಮಸ್ಯೆಗಳಿಗೂ ಕಾರಣವಾಗುತ್ತದೆ 

ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ 

ನಿರುದ್ಯೋಗಿ ಆಗಿದ್ರೂ ಪರ್ಸನಲ್‌ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ... 

Pixabay