ನೋವು ನಿವಾರಕ ಔಷಧಿಗಳನ್ನು ಅತಿಯಾಗಿ ಸೇವಿಸಿದ್ರೆ ಈ ಸಮಸ್ಯೆಗಳು ಕಾಡಬಹುದು ಎ‌ಚ್ಚರ

By Reshma
Sep 25, 2024

Hindustan Times
Kannada

ದೇಹದ ಯಾವುದೇ ಭಾಗದಲ್ಲಿ ನೋವು ಉಂಟಾದರೂ ಇದನ್ನು ನಿವಾರಿಸಲು ನಾವು ಪೇನ್ ಕಿಲ್ಲರ್ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ 

ಆದರೆ ಈ ನೋವು ನಿವಾರಕ ಔಷಧಿಗಳನ್ನು ಅತಿಯಾಗಿ ಸೇವಿಸಿದ್ರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುವುದು ಸುಳ್ಳಲ್ಲ 

ಸಣ್ಣಪುಟ್ಟ ನೋವುಗಳಿಗೂ ಪದೇ ಪದೇ ಮಾತ್ರೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ನೋವು ನಿವಾರಕ ಮಾತ್ರೆ ತೆಗೆದುಕೊಂಡರೆ ಏನಾಗುತ್ತೆ ನೋಡಿ 

ಅತಿಯಾಗಿ ನೋವು ನಿವಾರಕಗಳನ್ನು ಸೇವಿಸುವುದರಿಂದ ಹೊಟ್ಟೆಯರಿ, ಹುಣ್ಣು ಮತ್ತು ಅಂತರಿಕ ರಕ್ತಸ್ರಾವದಂತಹ ಸಮಸ್ಯೆಗಳು ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ

ದೀರ್ಘಾವಧಿ ನೋವು ನಿವಾರಕಗಳನ್ನ ಬಳಸುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಇದು ರಕ್ತಪರಿಚಲನೆಗೆ ತೊಂದರೆ ಉಂಟು ಮಾಡಬಹುದು 

ಹೆಚ್ಚು ನೋವು ನಿವಾರಕ ಮಾತ್ರೆಗಳನ್ನು ತಿನ್ನುವುದು ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು 

ನೋವು ನಿವಾಕರಗಳ ಅತಿಯಾದ ಬಳಕೆಯು ಕೆಲವರಿಗೆ ತಲೆನೋವಿನ ಸಮಸ್ಯೆಯನ್ನು ಉಂಟು ಮಾಡಬಹುದು, ಇದರಿಂದ ಅತಿಯಾದ ತಲೆನೋವು ಕಾಣಿಸಬಹುದು 

ಅನಿವಾರ್ಯ ಕಾರಣಗಳಿಂದ ನೋವು ನಿವಾರಕಗಳನ್ನು ಸೇವಿಸಬೇಕಾದರೆ ನಾಲ್ಕೈದು ಗಂಟೆಗಳ ಅಂತರ ಇರಬೇಕು. ಪದೇ ಪದೇ ತಿನ್ನುವುದು ಸರಿಯಲ್ಲ 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?