ನೆನೆಸಿದ ಬಾದಾಮಿ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
pixa bay
By Reshma Oct 07, 2023
Hindustan Times Kannada
ಬಾದಾಮಿಯನ್ನು ರಾತ್ರಿಯಿಡಿ ಕೋಣೆಯ ಉಷ್ಣಾಂಶದಲ್ಲಿ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೆನೆಸಿಡಿ. ಬೆಳಗೆದ್ದು ಒಂದು ಲೋಟ ನೀರು ಕುಡಿದ ನಂತರ ನೆನೆಸಿಟ್ಟು ಬಾದಾಮಿಯನ್ನು ಸೇವಿಸಬಹುದು. ತಿನ್ನುವ ಮೊದಲು ಬಾದಾಮಿ ಸಿಪ್ಪೆ ತೆಗೆಯಬೇಕು ಎಂಬುದನ್ನು ಮರೆಯದಿರಿ.
pixa bay
ಬಾದಾಮಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬು ಅಧಿಕವಾದ್ದು, ಇದು ಹೃದಯದ ಆರೋಗ್ಯಕ್ಕೆ ಉತ್ತಮ.ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದ್ರೋಗದ ಅಪಾಯವನ್ನು ತಡೆಯುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
pixa bay
ಬಾದಾಮಿಯು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದ ಉತ್ತಮ ಮೂಲವಾಗಿದೆ. ಇದರ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.
ಬಾದಾಮಿಯಲ್ಲಿ ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇರುತ್ತದೆ. ನಾರಿನಾಂಶ ಹಾಗೂ ಪ್ರೊಟೀನ್ ಸಮೃದ್ಧವಾಗಿರುತ್ತದೆ. ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
pixa bay
ಬಾದಾಮಿಯಲ್ಲಿ ವಿಟಮಿನ್ ಇ ಅಧಿಕವಾಗಿದ್ದು, ಇದು ಚರ್ಮ, ಕಣ್ಣು ಮತ್ತು ಉಗುರು ಆರೋಗ್ಯಕ್ಕೆ ಬಹಳ ಅವಶ್ಯವಾಗಿದೆ.
pixa bay
ಕೊಲೆಸ್ಟ್ರಾಲ್ ಪ್ರಮಾಣವನ್ನ ತಗ್ಗಿಸುತ್ತದೆ.
pixa bay
ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ.
pixa bay
ಜೀರ್ಣಕ್ರಿಯೆಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ನೆನೆಸಿದ ಬಾದಾಮಿ ಸೇವನೆ ಉತ್ತಮ.