ವೈರಲ್ ಫಿವರ್ ಇದ್ದಾಗ ಏನು ತಿನ್ಬೇಕು, ಯಾವ ಆಹಾರ ತಿನ್ನಬಾರದು, ಇಲ್ಲಿದೆ ಮಾಹಿತಿ 

By Reshma
Sep 22, 2024

Hindustan Times
Kannada

ಮಳೆಗಾಲ ಮುಗಿದು ಚಳಿಗಾಲ ಶುರುವಾಗುವ ಹೊತ್ತು. ಈ ಸಮಯದಲ್ಲಿ ಹಗಲಿನಲ್ಲಿ ಅತಿಯಾದ ಬಿಸಿಲು ಹಾಗೂ ರಾತ್ರಿ ವೇಳೆ ಶೀತ ವಾತಾವರಣ, ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ 

ಹವಾಮಾನ ಬದಲಾವಣೆಯು ವೈರಲ್ ಜ್ವರದ ಪ್ರಮಾಣವನ್ನು ಹೆಚ್ಚಿಸಿದೆ. ಬದಲಾಗುತ್ತಿರುವ ಹವಾಮಾನ ಮಾತ್ರವಲ್ಲ ಅನಾರೋಗ್ಯಕರ ಆಹಾರ ಮತ್ತು ಕಲುಷಿತ ನೀರಿನಿಂದಲೂ ವೈರಲ್ ಫೀವರ್ ಹರಡುತ್ತದೆ

ವೈರಲ್ ಜ್ವರಕ್ಕೆ ಔಷಧಿ ಸೇವನೆಗಿಂತ ವಿಶ್ರಾಂತಿ ಬಹಳ ಮುಖ್ಯ. ಅದರೊಂದಿಗೆ ನಾವು ಸೇವಿಸುವ ಆಹಾರದ ಮೇಲೂ ಹೆಚ್ಚು ಗಮನ ಹರಿಸಬೇಕು

ವೈರಲ್ ಜ್ವರದ ಸಂದರ್ಭ ಏನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ವಿವರ ಇಲ್ಲಿದೆ 

ವೈರಲ್ ಜ್ವರ ಬಂದಾಗ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ತಾಜಾ ಆಹಾರಗಳ ಸೇವನೆಗೆ ಒತ್ತು ನೀಡಬೇಕು 

ಜ್ವರದ ಕಾರಣ ಜೀರ್ಣಕ್ರಿಯೆಯ ತೊಂದರೆ ಇರುತ್ತದೆ. ಆ ಕಾರಣಕ್ಕೆ ಬೇಗ ಜೀರ್ಣವಾಗುವ ಆಹಾರಗಳಾದ ಪೋಹ, ಗಂಜಿ, ಖಿಚಡಿ, ಬೇಳೆಕಾಳು ಮತ್ತು ಅನ್ನವನ್ನು ಹೆಚ್ಚು ಸೇವಿಸಬೇಕು 

ವೈರಲ್‌ ಬಂದಾಗ ಅತಿಯಾದ ಸುಸ್ತು ಕಾಡುವ ಕಾರಣ ಪೋಷಕಾಂಶ ಸಮೃದ್ಧ ಆಹಾರ ಸೇವಿಸಬೇಕು. ಇದರಿಂದ ದೇಹದಲ್ಲಿ ಶಕ್ತಿ ಕುಂಠಿತವಾಗುವುದಿಲ್ಲ. ಸಾಧ್ಯವಾದಷ್ಟು ದ್ರವಾಹಾರ ಸೇವಿಸಿ 

ವೈರಲ್ ಜ್ವರದ ಸಂದರ್ಭ ತಣ್ಣೀರು ಕುಡಿಯುವುದು, ಕೋಲ್ಡ್ ಐಟಂಗಳನ್ನು ತಿನ್ನುವುದಕ್ಕೆ ಕಡಿವಾಣ ಹಾಕಿ. ಇದರಿಂದ ಜ್ವರ ಇನ್ನಷ್ಟು ಹೆಚ್ಚಾಗಬಹುದು

ಜ್ವರ ಬಂದು ಹೊಟ್ಟೆ ಕೆಟ್ಟಿದ್ದರೆ ಹೆಚ್ಚು ಕಷಾಯ ಕುಡಿಯಬೇಡಿ. ಎಲೆಕೋಸು, ಕಿಡ್ನಿ ಬೀನ್ಸ್, ಆಲೂಗೆಡ್ಡೆ ಜೊತೆಗೆ ನಂಜಿನಾಂಶ ಇರುವ ಆಹಾರ ಸೇವಿಸಿದೇ ಇರುವುದು ಉತ್ತಮ 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನ ಸಂಪರ್ಕಿಸಿ  

ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ

slurrp