ನೈಸರ್ಗಿಕವಾಗಿ ಹೊಟ್ಟೆಯ ಬೊಜ್ಜು ಕರಗಿಸುವ 5 ಗಿಡಮೂಲಿಕೆಗಳಿವು 

By Reshma
May 08, 2024

Hindustan Times
Kannada

ದೇಹ ದಂಡಿಸದೇ ನೈಸರ್ಗಿಕ ವಿಧಾನಗಳ ಮೂಲಕ ಹೊಟ್ಟೆಯ ಬೊಜ್ಜು ಕರಗಿಸುವ ಆಸೆ ನಿಮಗಿದ್ದರೆ ಈ ಗಿಡಮೂಲಿಕೆಗಳು ನಿಮಗೆ ಖಂಡಿತ ಸಹಾಯ ಮಾಡುತ್ತವೆ. ಇವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಶುಂಠಿ 

ಶುಂಠಿ ಕ್ಯಾಲೊರಿ ಬರ್ನ್‌ ಮಾಡುವುದು ಮಾತ್ರವಲ್ಲ, ಹಸಿವನ್ನೂ ನಿಯಂತ್ರಿಸುತ್ತದೆ. ಇದು ಗ್ಯಾಸ್ಟ್ರಿಕ್‌ ಕಿಣ್ವಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. 

ಅರಿಸಿನ 

ಇದರಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಹೇರಳವಾಗಿದ್ದು ಇದು ಚಯಾಪಚಯವನ್ನು ವೃದ್ಧಿಸಿ ಕೊಬ್ಬು ಕರಗಿಸಲು ನೆರವಾಗುತ್ತದೆ. 

ಮೆಂತ್ಯೆ 

ಮೆಂತ್ಯವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಆಹಾರದ ಕಡು ಬಯಕೆಯನ್ನು ನಿಗ್ರಹಿಸುತ್ತದೆ. ಚಯಾಪಚಯನ್ನು ಸುಧಾರಿಸಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

ದಾಲ್ಚಿನ್ನಿ 

ದಾಲ್ಚಿನ್ನಿ ಹಸಿವನ್ನು ನಿಯಂತ್ರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಚಯಾಪಚಯ ದರವನ್ನು ಹೆಚ್ಚಿಸಿ, ತೂಕ ನಷ್ಟವನ್ನು ಉತ್ತೇಜಿಸುತ್ತದೆ. 

ಅಶ್ವಗಂಧ 

ಅಶ್ವಗಂಧ ದೇಹದಲ್ಲಿ ಶಕ್ತಿಯನ್ನು ಉತ್ತೇಜಿಸುತ್ತದೆ. ಜೊತೆಗೆ ದೇಹದ ಕೊಬ್ಬಿನಾಂಶ ನಿವಾರಿಸಲು ಸಹಾಯ ಮಾಡುತ್ತದೆ. ಇದು ಕಾರ್ಟಿಸೋಲ್‌ ಮಟ್ಟವನ್ನು ಕಡಿಮೆ ಮಾಡಿ ತೂಕ ನಿರ್ವಹಣೆಯನ್ನು ಉತ್ತೇಜಿಸುತ್ತದೆ.  

ಮುದ್ದಿನ ಅರಗಿಣಿಯಾದ ಕಿಯಾರ ಅಡ್ವಾಣಿ