ತಡವಾಗಿ ಗರ್ಭ ಧರಿಸುವುದು ಹಲವು ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ಫಲವಂತಿಕೆಯ ಪ್ರಮಾಣವೂ ಕಡಿಮೆಯಾಗುತ್ತದೆ
ಹಾಗಾದರೆ ತಾಯಿಯಾಗಲು ಸೂಕ್ತ ವಯಸ್ಸು ಯಾವುದು, ಸರಿಯಾದ ವಯಸ್ಸಿಗೆ ಗರ್ಭ ಧರಿಸಿಲ್ಲ ಎಂದರೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ನೋಡಿ
ಗರ್ಭ ಧರಿಸಲು ಸೂಕ್ತ ವಯಸ್ಸು 25 ರಿಂದ 30 ಎಂದು ತಜ್ಞರು ಸಲಹೆ ನೀಡುತ್ತಾರೆ
ಈ ವಯಸ್ಸಿನಲ್ಲಿ ಫಲವಂತಿಕೆಯು ಚೆನ್ನಾಗಿರುತ್ತದೆ. ಈ ಸಮಯದಲ್ಲಿ ದೇಹದ ಇತರ ಭಾಗಗಳೂ ಬದಲಾಗುವ ವಯಸ್ಸು
30 ವರ್ಷದ ಒಳಗೆ ಗರ್ಭ ಧರಿಸುವುದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ಉತ್ತಮ. ಇದರಿಂದ ಇಬ್ಬರ ಆರೋಗ್ಯಕ್ಕೂ ಸುಧಾರಿಸುತ್ತದೆ
30 ವರ್ಷದ ನಂತರವೂ ನೈಸರ್ಗಿಕವಾಗಿ ಗರ್ಭ ಧರಿಸಬಹುದು ಮತ್ತು ಆರೋಗ್ಯಕರ ಮಗುವಿಗೆ ಜನ್ಮ ನೀಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ
ವಯಸ್ಸಾದಂತೆ ಅದರಲ್ಲೂ 35 ವರ್ಷದ ನಂತರ ಮಹಿಳೆಯರಲ್ಲಿ ಅಂಡಾಣುವಿನ ಗುಣಮಟ್ಟದ ಕಡಿಮೆಯಾಗುತ್ತದೆ. ಅಲ್ಲದೇ ಈ ವಯಸ್ಸಿನಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ವಯಸ್ಸಾದಂತೆ ಗರ್ಭಧಾರಣೆ ಸಾಧ್ಯತೆಗಳು ಕಡಿಮೆಯಾಗುತ್ತವೆ. ಹಾಗಾಗಿ ತಡವಾಗಿ ಗರ್ಭ ಧರಿಸುವ ಬಗ್ಗೆ ಯೋಚಿಸಬೇಡಿ