ಚಳಿಗಾಲದಲ್ಲಿ ಕಾಳುಮೆಣಸು, ಲವಂಗ ತಿನ್ನುವುದರ ಪ್ರಯೋಜನಗಳಿವು
By Reshma
Dec 24, 2024
Hindustan Times
Kannada
ಹವಾಮಾನ ಬದಲಾವಣೆಯು ಕೆಮ್ಮು, ಶೀತದಂತಹ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕಾಗಿ ಕೆಲವರು ಲವಂಗ, ಕಾಳುಮೆಣಸು ತಿನ್ನುತ್ತಾರೆ. ಇದರ ಚಹಾವನ್ನೂ ಕುಡಿಯುತ್ತಾರೆ
ಈ ಎರಡೂ ದೇಹವನ್ನು ಬೆಚ್ಚಗಾಗಿಸುವ ಗುಣವನ್ನು ಹೊಂದಿವೆ. ಇದನ್ನು ತಿನ್ನುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು
ಶೀತ, ಕೆಮ್ಮು ಅಥವಾ ನೆಗಡಿ ಸಮಸ್ಯೆ ಇದ್ದರೆ ಕಾಳುಮೆಣಸು, ಲವಂಗದ ಚಹಾ ಕುಡಿಯಬೇಕು. ಇದರಿಂದ ಶೀಘ್ರ ಪರಿಹಾರ ಕಂಡುಕೊಳ್ಳಬಹುದು
ನಿಮಗೆ ಕೆಮ್ಮು ಇದ್ದು, ಕಫ ಹೊರ ಬಂದಿಲ್ಲ ಎಂದರೆ ಈ ಎರಡರಲ್ಲಿ ಯಾವುದಾದರೂ ಒಂದರ ರಸ ಕುಡಿಯಿರಿ. ಇದರಿಂದ ಕಫ ಕರಗಿ ಹೊರ ಬರುತ್ತದೆ
ನೀವು ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಲವಂಗ, ಕಾಳುಮೆಣಸು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ
ಕಾಳುಮೆಣಸು ಮತ್ತು ಲವಂಗದಲ್ಲಿ ಉತ್ಕರ್ಷಣ ನಿರೋಧಕ ಅಂಶಗಳಿವೆ. ಇದನ್ನು ತಿನ್ನುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ
ನೀವು ಗಂಟಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಲವಂಗದ ನೀರಿನಿಂದ ಗಾರ್ಗಲ್ ಮಾಡಿ. ಇದಕ್ಕಾಗಿ ಲವಂಗವನ್ನು ನೀರಿನಲ್ಲಿ ಕುದಿಸಿ
ಲವಂಗ ಕರಿಮೆಣಸು ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ
ಲವಂಗ ಹಾಗೂ ಕಾಳಮೆಣಸು ತೂಕ ನಿಯಂತ್ರಣಕ್ಕೂ ಸಹಕಾರಿ. ಇದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ಕ್ರಿಸ್‌ಮಸ್‌ಗೆ ಥಿಯೇಟರ್‌ನಲ್ಲಿ ಯಾವ ಸಿನಿಮಾ ನೋಡ್ತಿರಿ? ಮ್ಯಾಕ್ಸ್‌ನಿಂದ ಬೇಬಿ ಜಾನ್ ತನಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ