ಮಲೇರಿಯಾ ಹರಡದಂತೆ ತಡೆಯಲು ಈ ಟಿಪ್ಸ್‌ಗಳನ್ನು ಅನುಸರಿಸೋಕೆ ಮರಿಬೇಡಿ
By Reshma Apr 25, 2024
Hindustan Times Kannada
ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್ 25 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ಮಲೇರಿಯಾವನ್ನು ನಿಯಂತ್ರಿಸುವ ಮಹತ್ವವನ್ನು ಈ ದಿನ ಒತ್ತಿ ಹೇಳುತ್ತದೆ.
ಮಲೇರಿಯಾದಿಂದ ಜಗತ್ತು ಎದುರಿಸುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ 2007ರಲ್ಲಿ ವಿಶ್ವ ಮಲೇರಿಯಾದ ದಿನ ಆಚರಣೆಗೆ ಕರೆ ನೀಡಲಾಯಿತು. ʼಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತುʼ ಎಂಬುದು ಈ ವರ್ಷದ ಥೀಮ್ ಆಗಿದೆ.
ಶೀತ, ತಲೆನೋವು, ಸ್ನಾಯುಗಳ ಸೆಳೆತ, ಆಯಾಸ, ಜ್ವರ ಇವು ಮಲೇರಿಯಾದ ಸಾಮಾನ್ಯ ಲಕ್ಷಣಗಳಾಗಿವೆ.
ಸೊಳ್ಳೆಗಳು ಬಾರದಂತೆ ನೋಡಿಕೊಳ್ಳುವುದು ಮಲೇರಿಯಾದ ತಡೆಗಟ್ಟುವ ಮೊದಲ ಹಂತ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.
ಸಾಧ್ಯವಾದಷ್ಟು ಮನೆಯ ಒಳಗೆ ಇರಲಿ. ಮಕ್ಕಳು ಕೂಡ ಮನೆಯೊಳಗೆ ಆಟವಾಡುವಂತೆ ನೋಡಿಕೊಳ್ಳಿ. ಮನೆಯೊಳಗೆ ಸೊಳ್ಳೆ ಬರುವುದನ್ನು ತಡೆಯಲು ಅಗತ್ಯ ಕ್ರಮವನ್ನು ಪಾಲಿಸಿ.
ರಾತ್ರಿ ಮಲಗುವಾಗ ಸೊಳ್ಳೆ ಪರದೆ ಇರಲಿ. ಮಕ್ಕಳಿಗೆ ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಹಾಕಿಯೇ ಮಲಗಿಸಿ.
ಸೊಳ್ಳೆ ನಿವಾರಕಗಳನ್ನು ಮೈಗೆ ಹಚ್ಚಿಕೊಳ್ಳಿ. ಇದರಿಂದ ಸೊಳ್ಳೆ ಕಡಿತ ತಪ್ಪಿಸಬಹುದು.
ಮನೆ ಹಾಗೂ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸಿಕೊಳ್ಳಿ. ಇದರಿಂದ ಸೊಳ್ಳೆ ಕಡಿಯುವುದನ್ನು ತಪ್ಪಿಸಬಹುದು.