ಆಫೀಸ್‌ ಕೆಲಸದ ನಡುವೆ ಈ ರೀತಿ ಡಯೆಟ್‌ ಮಾಡಿ- 5 ಸಲಹೆ

pixa bay

By Praveen Chandra B
Nov 25, 2024

Hindustan Times
Kannada

ಆಫೀಸ್‌ನಲ್ಲಿ ಕೆಲಸ ಮಾಡುವಾಗ ಆರೋಗ್ಯದ ಕುರಿತು ಗಮನ ನೀಡಿ. ಅದಕ್ಕಾಗಿ ನೀವು ಮುಂದಿನ ಸಲಹೆ ಗಮನಿಸಿ.

pixa bay

ಸಾಕಷ್ಟು ನೀರು ಕುಡಿಯಿರಿ: ಆಫೀಸ್‌ ಕೆಲಸ ಮುಗಿಸುವ ವೇಳೆ ಕಡಿಮೆಯೆಂದರೂ ಮೂರು ಲೀಟರ್‌ ನೀರು ಕುಡಿದಿರಬೇಕು.

pixa bay

ಆರೋಗ್ಯಕರ ಸ್ನ್ಯಾಕ್ಸ್‌: ಅನಾರೋಗ್ಯಕಾರಿ ಸ್ನ್ಯಾಕ್ಸ್‌ ಸೇವನೆ ಬದಲು ಸಣ್ಣ ಬಾಕ್ಸ್‌ನಲ್ಲಿ ನ್ಯೂಟ್ರಿಷಿಯನ್‌ ಅಧಿಕವಿರುವಂತಹ ಆಹಾರವನ್ನು ಆಫೀಸ್‌ಗೆ ಕೊಂಡೊಯ್ಯಿರಿ. 

pixa bay

ಕೆಫಿನ್‌ ಕಡಿಮೆ ಮಾಡಿ: ಆಫೀಸ್‌ನಲ್ಲಿ ಉಚಿತ ಚಹಾ ಕಾಫಿ ದೊರಕುತ್ತದೆ ಎಂದು ಕುಡಿಯಬೇಡಿ. ಇದು ಕೆಲಸ ಮಾಡುವಾಗ ಶಕ್ತಿ ನೀಡಿದಂತೆ ಅನಿಸುತ್ತದೆ. ಆದರೆ, ಕೆಫಿನ್‌ ಅತ್ಯಧಿಕವಾದರೆ ಹೈಪರ್‌ ಆಸಿಡಿಟಿ, ಮಂಕು ಭಾವ ಮೂಡುತ್ತದೆ. ಇದರ ಬದಲು ಹರ್ಬಲ್‌ ಟೀ ಅಥವಾ ಹಣ್ಣಿನ ಜ್ಯೂಸ್‌ ಕುಡಿಯಿರಿ.

ಸಮತೋಲಿತ ಲಂಚ್‌: ಮನೆಯಲ್ಲಿ ಸಾಧ್ಯವಿರುವಾಗ ಆರೋಗ್ಯಕರ ಲಂಚ್‌ ಸಿದ್ಧ ಮಾಡಿ. ಅತ್ಯಧಿಕ ಪ್ರೊಟಿನ್‌ ಇರುವ ತರಕಾರಿ, ಹಣ್ಣುಗಳು ಇತ್ಯಾದಿಗಳು ಇರುವ ಸಮತೋಲಿತ ಆಹಾರ ಲಂಚ್‌ ಬಾಕ್ಸ್‌ನಲ್ಲಿ ಇರಲಿ.

pixa bay

ಜಗಿದು ತಿನ್ನಿ: ತಿಂಡಿ ತಿನಿಸುಗಳನ್ನು ಸರಿಯಾಗಿ ಜಗಿದು ಸೇವಿಸುವುದು ಅತ್ಯಗತ್ಯ. ಆಹಾರ ಸೇವನೆ ಕ್ರಮ ಉತ್ತಮಪಡಿಸಿಕೊಳ್ಳಿ. ಹೊಟ್ಟೆ ಖಾಲಿಯಾಗಿರುವಾಗ ಹಸಿವಾದಗ ಏನಾದರೂ ಚೂರುಪಾರು ಸೇವಿಸಲು ಮರೆಯಬೇಡಿ.

pixa bay

ಆಫೀಸ್‌ನಲ್ಲಿ ಎಷ್ಟೇ ಕೆಲಸ ಇರಲಿ, ಕೆಲಸದ ನಡುವೆ ನಿಮ್ಮ ಡಯೆಟ್‌ ಅನುಸರಿಸಲ ಸಮಯ ಮಾಡಿಕೊಂಡು ಆರೋಗ್ಯವಾಗಿರಿ.

pixa bay

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ