ಗ್ರೀನ್‌ ಟೀ ಕುಡಿದರೆ ತೂಕ ಕಡಿಮೆ ಆಗುತ್ತಾ? 

LH

By Umesh Kumar S
Sep 28, 2024

Hindustan Times
Kannada

ಗ್ರೀನ್‌ ಟೀ  ಪೋಷಕಾಂಶಗಳಿಂದ ಕೂಡಿದೆ. ಹಾಗಂತ ನಿತ್ಯವೂ ಗ್ರೀನ್‌ ಟೀ ಕುಡಿದರೆ ತೂಕ ಕಡಿಮೆ ಆಗುತ್ತಾ? 

ಸಂದೇಹ ಇದೆ ಅಲ್ವ, ಪ್ರತಿದಿನ ಗ್ರೀನ್‌ ಟೀ ಕುಡಿದರೆ ತೂಕ ಇಳಿಯೋದು ನಿಜವೋ, ಸುಳ್ಳೋ ಅಂತ ತಿಳಿಯೋಣ.

ಆರೋಗ್ಯ ತಜ್ಞರ ಪ್ರಕಾರ ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಗ್ರೀನ್ ಟೀ ವರದಾನ. 

ಗ್ರೀನ್‌ ಟೀಯಲ್ಲಿ ಕೆಫೀನ್ ಮತ್ತು ಕ್ಯಾಟೆಚಿನ್ ಎಂಬ ಅಂಶಗಳಿವೆ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಮೆಡಿಕಲ್ ನ್ಯೂಸ್ ಟುಡೇ ವರದಿ ಪ್ರಕಾರ, ಗ್ರೀನ್ ಟೀ ಚಯಾಪಚಯ ಚುರುಕುಗೊಳಿಸಲು ಸಹಾಯ ಮಾಡಿ ತೂಕ ಇಳಿಸುತ್ತೆ. 

ಗ್ರೀನ್‌ ಟೀ ಕೆಫೀನ್ ಮತ್ತು ಕ್ಯಾಟೆಚಿನ್ ಎಂಬ ಫ್ಲೇವನಾಯ್ಡ್ ಅನ್ನು ಹೊಂದಿದ್ದು, ಇದು ಒಂದು ರೀತಿಯ ಉತ್ಕರ್ಷಣ ನಿರೋಧಕ.

ಈ ಉತ್ಕರ್ಷಣ ನಿರೋಧಕಗಳು ಚಯಾಪಚಯವನ್ನು ಚುರುಕುಗೊಳಿಸುವ ಮೂಲಕ ತೂಕ ಕಡಿಮೆ ಮಾಡಲು ಸಹಕಾರಿ.  

ನಿತ್ಯ ಗ್ರೀನ್ ಟೀ ಕುಡಿದರೆ ಅತಿಯಾಗಿ ತಿನ್ನುವ ಸಮಸ್ಯೆಗೆ ಕಾರಣವಾಗಲ್ಲ.ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀನಲ್ಲಿ ಕಂಡುಬರುವ ಪೋಷಕಾಂಶಗಳು ತೂಕ ಕಡಿಮೆ ಮಾಡುವುದರ ಜೊತೆಗೆ, ಚರ್ಮದ ಆರೋಗ್ಯ ಸುಧಾರಿಸುತ್ತೆ.

ಶರೀರವನ್ನು ಬಲಪಡಿಸುವುದು ಸೇರಿ ಹಲವು ರೀತಿಯಲ್ಲಿ ಗ್ರೀನ್ ಟೀ ಪ್ರಯೋಜನಕಾರಿ.

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದ್ದು, ಆರೋಗ್ಯ ಸಂಬಂಧಿಸಿದ ನಿಖರ ಸಲಹೆಗೆ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ

ಕೂದಲು ಬೆಳವಣಿಗೆಗೆ ಬೆಳ್ಳುಳ್ಳಿ ಎಣ್ಣೆ ಬೆಸ್ಟ್, ಮನೆಯಲ್ಲೇ ಮಾಡ್ಬೋದು