ಶುಭ ಕಾರ್ಯಗಳಲ್ಲಿ ಉಪಯೋಗಿಸಲಾಗುವ ಎಲೆಗಳು

By Rakshitha Sowmya
Dec 15, 2024

Hindustan Times
Kannada

 ಹಿಂದೂ ಧರ್ಮದಲ್ಲಿ ಕೆಲವೊಂದು ಮರಗಳು, ಎಲೆಗಳಿಗೆ ಬಹಳ ಪ್ರಾಮುಖ್ಯತೆ ಇದೆ

 ಹಿಂದೂ ಧರ್ಮದಲ್ಲಿ ಕೆಲವೊಂದು ಮರಗಳು, ಎಲೆಗಳಿಗೆ ಬಹಳ ಪ್ರಾಮುಖ್ಯತೆ ಇದೆ

ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಬಳಸಲಾಗುತ್ತದೆ, ವಿಷ್ಣುವಿಗೆ ತುಳಸಿಯನ್ನು ಅರ್ಪಿಸಲಾಗುತ್ತದೆ

ಈಶ್ವರನಿಗೆ ಬಿಲ್ವಪತ್ರೆ ಎಂದರೆ ಬಹಳ ಪ್ರಿಯ, ಪ್ರತಿ ಸೋಮವಾರ, ಮಹಾಶಿವರಾತ್ರಿಯಂದು ಬಿಲ್ವಪತ್ರೆಯಿಂದ ಪೂಜಿಸಿದರೆ ಶುಭ

ಬಹುತೇಕ ಎಲ್ಲಾ ಕಾರ್ಯಗಳಲ್ಲಿ ವಿಳ್ಯದೆಲೆಯನ್ನು ಬಳಸಲಾಗುತ್ತದೆ

ಹಿಂದೂ ಧರ್ಮದಲ್ಲಿ ಬಾಳೆಎಲೆ ಕೂಡಾ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ

ಹಬ್ಬಹರಿದಿನ, ಯಾವುದೇ ಶುಭ ಸಮಾರಂಭಗಳಲ್ಲಿ ಮಾವಿನ ಎಲೆಯಿಂದ ತೋರಣ ಕಟ್ಟಲಾಗುತ್ತದೆ

ಶನೈಶ್ಚರನಿಗೆ ಶಮಿ ಎಲೆಗಳನ್ನು ಅರ್ಪಿಸುವುದರಿಂದ ಶನಿದೋಷ ಕಳೆಯುತ್ತದೆ ಎಂಬ ನಂಬಿಕೆ ಇದೆ

ಅರಳಿ ಎಲೆಗಳ ಮೇಲೆ ಜೈಶ್ರೀರಾಮ್‌ ಎಂದು ಬರೆದು ಆಂಜನೇಯನಿಗೆ ಅರ್ಪಿಸುವುದರಿಂದ ಶುಭವಾಗುತ್ತದೆ

ವಟ ಸಾವಿತ್ರಿ ವ್ರತದಂದು ಆಲದ ಮರಕ್ಕೆ ಪೂಜೆ ಮಾಡಲಾಗುತ್ತದೆ 

ಗಣಪತಿಗೆ ಎಕ್ಕದ ಗಿಡದ ಹೂವಿನ ಹಾರಗಳನ್ನು ಅರ್ಪಿಸಲಾಗುತ್ತದೆ, ಬಿಳಿ ಎಕ್ಕದ ಗಿಡವನ್ನೂ ಪೂಜಿಸಲಾಗುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

New Year Trip: ಹೊಸ ವರ್ಷದ ಸ್ವಾಗತಕ್ಕೆ ಭಾರತದ 5 ಬಜೆಟ್​-ಸ್ನೇಹಿ ತಾಣಗಳಿವು