ಈ ಊರು ರುಕ್ಮಿಣಿಯ ತವರು, ಇಲ್ಲಿದೆ ಶ್ರೀಕೃಷ್ಣನ ಅತ್ತೆಮನೆ

By Jayaraj
May 07, 2024

Hindustan Times
Kannada

ಶ್ರೀ ಕೃಷ್ಣ ಜನಿಸಿದ್ದು ಮಥುರಾದಲ್ಲಿ. ವಾಸುದೇವನ ಮಡದಿ ದೇವಕಿಯ ಮಗ ಕೃಷ್ಣ ಹುಟ್ಟಿದ್ದು ಸೆರೆಮನೆಯಲ್ಲಿ ಎನ್ನುವ ಕುರಿತು ಪೌರಾಣಿಕ ಕಥೆಗಳು ಪ್ರಚಲಿತದಲ್ಲಿವೆ.

ಆದರೆ ಶ್ರೀ ಕೃಷ್ಣನ ಅತ್ತೆಯ ಮನೆ ಎಲ್ಲಿದೆ ಎಂಬ ಬಗ್ಗೆ ನಿಮಗೆ ಗೊತ್ತೆ? ಆ ಕುರಿತು ತಿಳಿಯೋಣ ಬನ್ನಿ.

ಧರ್ಮಗ್ರಂಥಗಳ ಪ್ರಕಾರ, ಶ್ರೀ ಕೃಷ್ಣನ ಅತ್ತೆಯ ಮನೆ ಅಮರಾವತಿಯಲ್ಲಿದೆ ಎಂದು ಹೇಳಲಾಗಿದೆ.

ಶ್ರೀ ಕೃಷ್ಣನ ಪತ್ನಿ ರುಕ್ಮಿಣಿ ಜನಿಸಿದ್ದು ಅಮರಾವತಿಯ ಕೌಂಡನ್ಯಪುರ ಗ್ರಾಮದಲ್ಲಿ. ಈಕೆಯ  ತಂದೆಯ ಹೆಸರು ಭೀಷ್ಮಕ.

ರುಕ್ಮಿಣಿಯು ತನ್ನ ಸ್ನೇಹಿತೆಯರೊಂದಿಗೆ ಅಂಬಾದೇವಿ ಮಾತೆಯ ದರ್ಶನಕ್ಕೆ ಹೋಗುತ್ತಿದ್ದಾಗ ಶ್ರೀ ಕೃಷ್ಣನು ಆಕೆಯನ್ನು ಅಪಹರಿಸಿದ್ದ.

ವಾಸ್ತವವಾಗಿ ರುಕ್ಮಿಣಿಯ ಶ್ರೀ ಕೃಷ್ಣನನ್ನು ನೋಡಿರಲಿಲ್ಲ. ಆದರೆ ಅವನ ಬಗ್ಗೆ ಸಾಕಷ್ಟು ಕೇಳಿದ್ದಳು.

ಶ್ರೀ ಕೃಷ್ಣನ ಲೀಲೆಗಳ ಬಗ್ಗೆ ಕೇಳಿದ ನಂತರ, ರುಕ್ಮಿಣಿ ದೇವಿಯು ಕೃಷ್ಣನನ್ನು ಪ್ರೀತಿಸುತ್ತಾಳೆ. ಬಳಿಕ ಮದುವೆಯಾಗಲು ನಿರ್ಧರಿಸಿದಳು.

ರುಕ್ಮಿಣಿಯ ತಂದೆ ಮತ್ತು ಸಹೋದರ ರುಕ್ಮಿ, ಆಕೆಗೆ ಮದುವೆ ನಿಶ್ಚಯಿಸಿದಾಗ, ರುಕ್ಮಿಣಿಯು ತನ್ನ ಮದುವೆ ಕೃಷ್ಣನೊಂದಿಗೆ ಆಗಬೆಂಕೆಂದು ಪ್ರಾರ್ಥಿಸಲು ಅಂಬಾದೇವಿ ದೇವಸ್ಥಾನಕ್ಕೆ ಹೋಗುತ್ತಾಳೆ.

ಆಗ ಶ್ರೀಕೃಷ್ಣನು ಅಲ್ಲಿಗೆ ಬಂದು ರುಕ್ಮಿಣಿ ದೇವಿಯ ಅಪೇಕ್ಷೆಯಂತೆ ಅವಳನ್ನು ಅಪಹರಿಸಿ ಮದುವೆಯಾದನು. ಅಮರಾವತಿಯ ರಾಜಕುಮಾರಿ ದ್ವಾರಕೆಯ ರಾಣಿಯಾದಳು.

(ಈ ಮಾಹಿತಿಯು ನಂಬಿಕೆ, ಪ್ರತೀತಿ ಮತ್ತು ಪುರಾಣವನ್ನು ಆಧರಿಸಿದೆ.)

ಮುದ್ದಿನ ಅರಗಿಣಿಯಾದ ಕಿಯಾರ ಅಡ್ವಾಣಿ