ಬಿಸಿಲ ಬೇಗೆಗೆ ಬಾಡದಿರಲಿ ತುಳಸಿ; ಬೇಸಿಗೆಯಲ್ಲಿ ತುಳಸಿ ಗಿಡವನ್ನು ಹೀಗೆ ಕಾಳಜಿ ಮಾಡಿ

By Reshma
Apr 02, 2024

Hindustan Times
Kannada

ಆಧಾತ್ಮ ಹಾಗೂ ಆಯುರ್ವೇದ ಎರಡರಲ್ಲೂ ಸಾಕಷ್ಟು ಮಹತ್ವ ಪಡೆದಿರುವ ತುಳಸಿ ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಇರುವ ಸಸ್ಯ. ಬೇಸಿಗೆಯಲ್ಲಿ ತುಳಸಿ ಗಿಡ ಬಾಡದಂತೆ ನೋಡಿಕೊಳ್ಳುವುದು ಸವಾಲು. 

ಬಿಸಿಲ ಬೇಗೆಯಿಂದ ತುಳಸಿ ಗಿಡವನ್ನು ರಕ್ಷಿಸುವುದು ಹೇಗೆ ಎಂದು ಚಿಂತೆ ಮಾಡುವವರಿಗೆ ಇಲ್ಲಿದೆ 5 ಸಲಹೆ. 

ಪಾಟಿಂಗ್‌: ಬೇಸಿಗೆಯಲ್ಲಿ ತುಳಸಿ ಗಿಡ ಚೆನ್ನಾಗಿ ಬೆಳೆಯಲು ತೇವಾಂಶ ಹೊಂದಿರುವ ಮಣ್ಣಿನ ಅಗತ್ಯವಿದೆ. ನೀವು ತೇವಾಂಶ ಇರುವ ಮಣ್ಣನ್ನು ತೆಂಗಿನನಾರಿನೊಂದಿಗೆ ಬೆರೆಸಿ ಮಧ್ಯಮ ಗಾತ್ರದ ಪಾಟ್‌ನಲ್ಲಿ ನೆಡಿ. ಪಾಟ್‌ನ ಬುಡದಲ್ಲಿ ಚಿಕ್ಕ ತೂತು ಇರಿಸಲು ಮರೆಯಬೇಡಿ. 

ಮಲ್ಚಿಂಗ್‌: ಮಲ್ಚಿಂಗ್‌ ಎನ್ನುವುದು ತೇವಾಂಶವನ್ನು ಕಾಪಾಡಲು ಹಾಗೂ ಬೇಸಿಗೆಯಲ್ಲಿ ಮಣ್ಣಿನಲ್ಲಿ ನೀರಿನಾಂಶ ಇರುವಂತೆ ನೋಡಿಕೊಳ್ಳುವ ಒಂದು ವಿಧಾನ. 

ನೀರು ಹನಿಸುವುದು: ಬೇಸಿಗೆಯಲ್ಲಿ ತುಳಸಿ ಗಿಡಕ್ಕೆ ತಪ್ಪದೇ ನೀರು ಹಾಕಬೇಕು. ಆದರೆ ಅತಿಯಾದ ಬಿಸಿಲಿನ ಸಮಯದಲ್ಲಿ ತಪ್ಪಿಯೂ ನೀರು ಹನಿಸಬೇಡಿ. 

ಎಲೆಗಳ ಮೇಲೆ ನೀರು ಸಿಂಪಡಿಸಿ: ಆರ್ದ್ರತೆ ಕಡಿಮೆ ಇರುವ ಸಮಯದಲ್ಲಿ ತುಳಸಿ ಎಲೆಗಳು ಹಾಗೂ ಕಾಂಡಗಳ ಮೇಲೆ ನೀರು ಸಿಂಪಡಿಸಿ. ಇದರಿಂದ ಗಿಡ ಹಸಿರಾಗಿರುತ್ತದೆ. 

ನೇರವಾಗಿ ಸೂರ್ಯನ ಬಿಸಿಲು ಬೀಳದಂತೆ ನೋಡಿಕೊಳ್ಳಿ: ಸೂರ್ಯನ ಕಿರಣಗಳು ನೇರವಾಗಿ ಗಿಡದ ಮೇಲೆ ಬೀಳದಂತೆ ನೋಡಿಕೊಳ್ಳುವುದು ಮುಖ್ಯ. ಯಾಕೆಂದರೆ ಯುವಿ ಕಿರಣಗಳು ಹಾಗೂ ಸೂರ್ಯನ ನೇರ ಕಿರಣಗಳು ಗಿಡಕ್ಕೆ ಹಾನಿ ಮಾಡಬಹುದು. ಹಾಗಾಗಿ ಮನೆಯ ಒಳಗೆ ಅಥವಾ ನೆರಳು ಬೀಳುವ ಜಾಗದಲ್ಲಿ ಇರಿಸಿ.  

ದಟ್ಟ ಕೂದಲು ಬೇಕೆನ್ನುವವರು ಲವಂಗದ ಎಣ್ಣೆಯ ಲಾಭ ತಿಳಿಬೇಕು