ಆಯಾ ರಾಶಿಗೆ ಅನುಗುಣವಾಗಿ ಹೇಗೆ ಸ್ವಯಂ ಕಾಳಜಿ ಮಾಡಬೇಕು

By HT Kannada Desk
May 07, 2024

Hindustan Times
Kannada

ಪ್ರತಿಯೊಬ್ಬರಿಗೂ ಸ್ವಯಂ ಕಾಳಜಿ ಅವಶ್ಯಕ. ವಯಸ್ಸು ಆಗುತ್ತಿದ್ದಂತೆ ಇನ್ನೂ ಹೆಚ್ಚಿನ ಕೇರ್‌ ಅಗತ್ಯ, ರಾಶಿಗೆ ಅನುಗುಣವಾಗಿ ಸ್ವಯಂ ಕಾಳಜಿ ಹೇಗೆ ಮಾಡಬಹುದು ನೋಡೋಣ

ನಿಮ್ಮನ್ನು ನೀವು ಸ್ವಯಂ ಕಾಳಜಿ ಮಾಡಬೇಕೆಂದರೆ ನಿಮಗೆ ಪೂರ್ಣ ದೇಹದ ವ್ಯಾಯಾಮ ಬಹಳ ಅವಶ್ಯಕವಾಗಿದೆ. ಇದರಿಂದ ನೀವು ಒತ್ತಡದಿಂದ ಹೊರ ಬರುವುದು ಮಾತ್ರವಲ್ಲದೆ, ನಿಮ್ಮ ಏಕಾಗ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. 

ನಿಮ್ಮಲ್ಲಿ ಸಕಾರಾತ್ಮಕ ನೆನಪುಗಳು, ಭಾವನೆಗಳನ್ನು ಜಾಗೃತಗೊಳಿಸಲು ಮಲಗುವ ಮುನ್ನ ನಿಮ್ಮಿಷ್ಟದ ಫ್ಲೇವರ್‌ನ ಕ್ಯಾಂಡಲ್‌ ಹಚ್ಚಿ, ಕಣ್ಣು ಮುಚ್ಚಿ ಏಕಾಗ್ರತೆಯಿಂದ‍ ಧ್ಯಾನ ಮಾಡಿ, ಇದು ನಿಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ

ನಿಮ್ಮ ಮನಸ್ಸು ಪದೇ ಪದೆ ಬದಲಾಗುತ್ತಿರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ನೀವು ಪದೇ ಪದೆ ಬದಲಿಸುತ್ತಲೇ ಇರುವಿರಿ, ಇದನ್ನು ಪರಿಹರಿಸಲು ನಿಮಗಾಗಿ 15 ನಿಮಿಷ ಬಿಡುವು ಮಾಡಿಕೊಂಡು ನಿಮಗೆ ಅನ್ನಿಸಿದ್ದನ್ನು ಮುಕ್ತವಾಗಿ ಒಂದು ಪುಸ್ತಕದಲ್ಲಿ ಬರೆಯಿರಿ

ನಿಮ್ಮ ಆಂತರಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ಯಾವುದೇ ಸ್ಪಟಿಕಗಳನ್ನು ಆರಿಸಿಕೊಳ್ಳಿ, ಅದನ್ನು ಕೈಯಲ್ಲಿ ಹಿಡಿದು ಸ್ವಲ್ಪ ಸಮಯ ಧ್ಯಾನ ಮಾಡಿ 

ನಿಮ್ಮ ದೈನಂದಿನ ಕೆಲಸಗಳಿಂದ ಸ್ವಲ್ಪ ಹೊರಗೆ ಬನ್ನಿ. ನಿಮ್ಮ ಮನಸ್ಸು ಖುಷಿಯಾಗಿರಲು ನಿಮಗಿಷ್ಟವಾದ ಸಂಗೀತವನ್ನು ಸ್ವಲ್ಪ ಸಮಯ ಕೇಳಿ, ಆನಂದಿಸಿ 

ನಿಮ್ಮ ಕಠಿಣ ಪರಿಶ್ರಮದಿಂದ ನೀವು ಅಂದುಕೊಂಡಿದ್ದನ್ನು ಸಾಧಿಸುವ ಸಾಮರ್ಥ್ಯ ಹೊಂದಿದ್ದೀರಿ. ಕಚೇರಿ ಇರಲಿ, ಮನೆ ಇರಲಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಿ, ಇದರಿಂದ ನಿಮಗೆ ಪಾಸಿಟಿವ್‌ ವೈಬ್ಸ್‌ ಅನುಭವ ಸಿಗುತ್ತದೆ.

ಇತರರಿಗೆ ಆದ್ಯತೆ ನೀಡುವ ನೀವು ನಿಮ್ಮನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಪ್ರತಿದಿನ ಸರಳವಾದ ಯೋಗದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ, ಇದರಿಂದ ನಿಮಲ್ಲಿ ಧನಾತ್ಮಕತೆ ಉಂಟು ಮಾಡುತ್ತದೆ

ನಿಮ್ಮ ಗಮನವನ್ನು ಕೇಂದ್ರೀಕರಿಸಲು ನೀವು ಪ್ರತಿ ದಿನ ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ

ನಿಮಗಾಗಿ ಸಮಯ ನೀಡಿ, ಪ್ರತಿ ದಿನ ಸ್ವಲ್ಪ ದೂರ ನಡೆಯಿರಿ, ಗಾಳಿಯನ್ನು ಆಸ್ವಾದಿಸಿ, ನಿಮ್ಮ ಸುತ್ತಮುತ್ತಲಿನ ಶಬ್ಧವನ್ನು ಆಲಿಸಿ

ಎಷ್ಟೇ ಕೆಲಸದ ಒತ್ತಡವಿದ್ದರೂ ಅದರಿಂದ ಹೊರ ಬನ್ನಿ, ನಿಮ್ಮ ಪ್ರೀತಿಪಾತ್ರರೊಂದಿಗೆ, ನಿಮ್ಮನ್ನು ಪ್ರೀತಿಸುವವರೊಂದಿಗೆ ಸ್ವಲ್ಪ ಸಮಯ ಕಾಲ ಕಳೆಯಿರಿ, ಇದು ನಿಮಗೆ ಇನ್ನಷ್ಟು ಉತ್ಸಾಹ ತುಂಬುತ್ತದೆ

ಪ್ರತಿದಿನ ನಿಮಗಾಗಿ ಒಂದು ಗಂಟೆ ಮೀಸಲಿಡಿ, ಮೊಬೈಲ್‌, ಇತರ ಜಂಜಾಟಗಳಿಂದ ದೂರ ಉಳಿದು ಸುಂದರ ಪ್ರಕೃತಿಯನ್ನು ಫೀಲ್‌ ಮಾಡಿ

ಪ್ರತಿದಿನ ಎದ್ದ ಕೂಡಲೇ ಒಂದು ಲೋಟ ಬೆಚ್ಚಗಿನ ನೀರು ಕುಡಿಯಿರಿ. ನಿಮ್ಮ ದೇಹವನ್ನು ಹೈಡ್ರೇಟ್‌ ಆಗಿ ಇಡುವುದು ನೀವು ತಾಳ್ಮೆಯಿಂದ, ಶಾಂತವಾಗಿ ಇರಲು ಸಹಾಯ ಮಾಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕಾಡುಕೋಣ(Indian Bison) ಭಾರತದಲ್ಲಿ ಶೇ.70ರಷ್ಟು ಸಂತತಿ ನಾಶವಾಗಿದೆ.