ನೀವು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಶನಿದೇವ ನಿಮ್ಮ ಮೇಲೆ ಕೋಪಗೊಂಡಿದ್ದಾನೆ ಎಂದು ಅರ್ಥ
By Rakshitha Sowmya Jun 06, 2024
Hindustan Times Kannada
ನ್ಯಾಯದ ದೇವರು ಎಂದೇ ಕರೆಯಲ್ಪಡುವ ಶನಿದೇವರ ಜಯಂತಿ ಇಂದು
ಶನಿ ಸಾಡೇಸಾತಿ ಎಂಬ ಹೆಸರು ಕೇಳಿದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಆದರೆ ಶನಿಯು ಎಲ್ಲರಿಗೂ ಕಷ್ಟ ನೀಡುವುದಿಲ್ಲ
ಒಂದು ವೇಳೆ ಶನಿಯು ನಿಮ್ಮ ಮೇಲೆ ಕೋಪಗೊಂಡಿದ್ದಾನೆ ಎಂದರೆ ನಿಮ್ಮ ಜೀವನದಲ್ಲಿ ಈ ಕಷ್ಟಗಳು ಕಟ್ಟಿಟ್ಟ ಬುತ್ತಿ
ಶನಿಯ ಪ್ರಭಾವದಿಂದ ವ್ಯಕ್ತಿಗಳ ಜೀವನದಲ್ಲಿ ಶುಖ ಶಾಂತಿ ಇರುವುದಿಲ್ಲ, ಮನಸ್ಸು ಸದಾ ಗೊಂದಲದಿಂದ ಕೂಡಿರುತ್ತದೆ, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಹಣದ ಕೊರತೆ ಕಾಡುತ್ತದೆ, ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಶನಿಯ ಪ್ರಭಾವವಿರುವ ವ್ಯಕ್ತಿಯು ದುಶ್ಚಟಗಳಿಗೆ ದಾಸನಾಗುತ್ತಾನೆ, ಹಣವನ್ನು ನೀರಿನಂತೆ ಪೋಲು ಮಾಡುತ್ತಾನೆ
ಶನಿಯು ಕೋಪಗೊಂಡರೆ ಆಯಾ ಜಾತಕದ ವ್ಯಕ್ತಿಗಳ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಅನಾರೋಗ್ಯ ಉಲ್ಬಣವಾಗುತ್ತದೆ
ಯಾವ ಕೆಲಸ ಆರಂಭಿಸಿದರೂ ಆ ಕೆಲಸದಲ್ಲಿ ನಾನಾ ಅಡೆಗಡೆಗಳು ಉಂಟಾಗುತ್ತದೆ, ಆ ಕೆಲಸ ಅರ್ಧದಲ್ಲೇ ನಿಲ್ಲಬಹುದು
ಆದ್ದರಿಂದ ಶನಿದೋಷದಿಂದ ಮುಕ್ತಿ ಹೊಂದಲು ಸೂಕ್ತ ಜ್ಯೋತಿಷಗಳನ್ನು ಸಂಪರ್ಕಿಸಿ ಪರಿಹಾರ ಕೈಗೊಳ್ಳಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.