ಮನೆಯಲ್ಲಿ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್‌

By Reshma
Mar 30, 2024

Hindustan Times
Kannada

ಬೇಸಿಗೆ ಕಾಲದಲ್ಲಿ ಬಿಸಿಲಿನ ಉರಿಯ ಜೊತೆಗೆ ಸೊಳ್ಳೆ ಕಾಟವೂ ಜಾಸ್ತಿಯಾಗುತ್ತದೆ. 

ಸೊಳ್ಳೆ ಕಡಿತದ ಹಿಂಸೆಯಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಹುಡುಕುವವರೇ ಹೆಚ್ಚು. 

ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಕಾಯಿಲ್‌ಗಳು, ಸೊಳ್ಳೆ ಬತ್ತಿಯಂತಹ ರಾಸಾಯನಿಕಗಳ ಮೊರೆ ಹೋಗುತ್ತಾರೆ. 

ಇವುಗಳಿಂದ ಸೊಳ್ಳೆ ಕಡಿಮೆಯಾಗುವುದು ನಿಜ ಆದರೆ ಇದು ಚರ್ಮ ಹಾಗೂ ಪರಿಸರ ಎರಡಕ್ಕೂ ಹಾನಿ ಮಾಡುತ್ತದೆ. 

ಆ ಕಾರಣಕ್ಕೆ ನೈಸರ್ಗಿಕ ವಿಧಾನಗಳಿಂದ ಸೊಳ್ಳೆ ಓಡಿಸುವ ಮಾರ್ಗ ಕಂಡುಕೊಳ್ಳಬೇಕು. 

ಇಲ್ಲಿ ನಾವು ಹೇಳುವ ಕ್ರಮವನ್ನು ಅನುಸರಿಸುವ ಮೂಲಕ ನೀವು ಸೊಳ್ಳೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಸುತ್ತಲೂ ಸೊಳ್ಳೆಗಳು ಸುಳಿದಾಡುವುದೂ ಇಲ್ಲ. 

ಬೇವಿನ ಎಲೆಗಳನ್ನು ಸುಡುವುದರಿಂದ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. 

ನಿಮ್ಮ ಮೈಗೆ ಬೇವಿನಎಣ್ಣೆ ಹಚ್ಚಿಕೊಳ್ಳುವುದರಿಂದ ಕೂಡ ಸೊಳ್ಳೆಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದು. 

ಹೀಗೆ ಬೇವಿನ ಎಲೆ, ಬೇವಿನ ಎಣ್ಣೆಯಿಂದ ಸೊಳ್ಳೆಗಳಿಂದ ಶಾಶ್ವತ ಪರಿಹಾರ ಸಿಗುತ್ತದೆ. ನೀವೂ ಪ್ರಯತ್ನಿಸಿ. 

ಬಾಲಿವುಡ್​ ಖ್ಯಾತ ನಟನ ಅಳಿಯ ನಿತೀಶ್ ರಾಣಾ!