ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಭಾರತ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ಎಷ್ಟು ಗೆಲುವುಗಳ ಅಗತ್ಯವಿದೆ ಎಂಬುದು ತಿಳಿಯಿರಿ.
3 ಪಂದ್ಯಗಳ ಸರಣಿಯಲ್ಲಿ 8 ವಿಕೆಟ್‌ಗಳ ಗೆಲುವಿನೊಂದಿಗೆ ಕಿವೀಸ್ 1-0 ಮುನ್ನಡೆ ಸಾಧಿಸಿದೆ. ಆ ಮೂಲಕ ಭಾರತ 36 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸೋತಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 46ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಕಿವೀಸ್ 402 ರನ್ ಗಳಿಸಿ 356 ರನ್ ಮುನ್ನಡೆ ಪಡೆಯಿತು. 2ನೇ ಇನ್ನಿಂಗ್ಸ್ನಲ್ಲಿ ಭಾರತ ಕಂಬ್ಯಾಕ್ ಮಾಡಿತು.
ಇದರೊಂದಿಗೆ 107 ರನ್ಗಳ ಗುರಿ ನೀಡಿದ ಭಾರತವನ್ನು ಕಿವೀಸ್ 8 ವಿಕೆಟ್ಗಳಿಂದ ಸೋಲಿಸಿತು. ಭಾರತ ಸೋತರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆಯಿತು.
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು, 1 ಡ್ರಾ ಸಾಧಿಸಿದೆ. 98 ಅಂಕ ಪಡೆದು ಗೆಲುವಿನ ಶೇಕಡವಾರು 68.06ಕ್ಕೆ ಇಳಿದಿದೆ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತಕ್ಕೆ ಇನ್ನೂ 5 ಗೆಲುವುಗಳ ಅಗತ್ಯ ಇದೆ. ಆದರೆ ತನ್ನ ಬಳಿ ಉಳಿದಿರುವುದು 7 ಪಂದ್ಯಗಳು ಮಾತ್ರ.
ಭಾರತ ಫೈನಲ್ ಪ್ರವೇಶಿಸಲು ತಾನು ಗೆಲ್ಲುವುದು ಮಾತ್ರವಲ್ಲ, ಬಾಂಗ್ಲಾದೇಶ-ಶ್ರೀಲಂಕಾ ತಂಡಗಳು ಸೌತ್ ಆಫ್ರಿಕಾ ಎದುರು ಗೆಲ್ಲುವುದು ಅಷ್ಟೇ ಮುಖ್ಯವಾಗಿದೆ.
ಮುಲ್ತಾನ್‌ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ 2ನೇ ಟೆಸ್ಟ್‌ನಲ್ಲಿ ಸೋತ ಇಂಗ್ಲೆಂಡ್, ಇದೀಗ ಅಧಿಕೃತವಾಗಿ WTC ರೇಸ್‌ನಿಂದ ಹೊರಬಿದ್ದಿದೆ
ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸಹ ಎಲಿಮಿನೇಡ್ ತಂಡಗಳ ಪಟ್ಟಿಗೆ ಸೇರಿಕೊಂಡಿವೆ. ಆದರೂ ಅಲ್ಪಸ್ವಲ್ಪ ಅವಕಾಶ ಇದೆ.
ಬಾಂಗ್ಲಾದೇಶ-ದಕ್ಷಿಣ ಆಫ್ರಿಕಾ ನಡುವೆ ಅಕ್ಟೋಬರ್ 21ರಿಂದ ಎರಡು ಪಂದ್ಯಗಳ ನಡೆಯಲಿದೆ. ಭಾರತ ಫೈನಲ್ ಪ್ರವೇಶಿಸುವ ಹಾದಿ ಸುಲಭವಾಗಲು ಬಾಂಗ್ಲಾ ಗೆಲ್ಲಬೇಕಾಗುತ್ತದೆ.