ಕಿವಿಗಳೇ ಇಲ್ಲದ ಹಾವು ಹೇಗೆ ಧ್ವನಿ ಕೇಳಿಸಿಕೊಳ್ಳುತ್ತವೆ?

By Umesh Kumar S
Sep 09, 2024

Hindustan Times
Kannada

ಭೂಮಿಯ ವಿಷಕಾರಿ ಜೀವಿಗಳ ಪೈಕಿ ಹಾವು ಕೂಡ ಒಂದು. ಬಹುತೇಕರು ನೇರ ನೋಡಿರ್ತಾರೆ. ಇತರರು ಫೋಟೋ, ವಿಡಿಯೋದಲ್ಲಿ ನೋಡಿರ್ತಾರೆ. 

ಹಾವುಗಳಿಗೆ ಕಣ್ಣುಗಳು ಖಚಿತವಾಗಿ ಇವೆ. ಆದರೆ ಕಿವಿಗಳಿಲ್ಲ. ಅವುಗಳು ಧ್ವನಿ ಆಲಿಸುವುದು ಹೇಗೆ

ಮನುಷ್ಯರಂತೆ, ಇತರೆ ಪ್ರಾಣಿಗಳಂತೆ ಅವುಗಳು ಧ್ವನಿ ಕೇಳದೇ ಇದ್ದರೆ, ಅದನ್ನು ಗ್ರಹಿಸುವುದು ಹೇಗೆ 

ಸಂಶೋಧನೆಗಳ ಪ್ರಕಾರ ಹಾವುಗಳು ಮನುಷ್ಯನ ಧ್ವನಿ ಕೇಳುವುದಷ್ಟೇ ಅಲ್ಲ, ಗುರುತಿಸುತ್ತವೆ ಕೂಡ.

ಹಾವಿಗೆ ಬಾಹ್ಯ ಕಿವಿಗಳಿಲ್ಲ. ಆದರೆ ಶರೀರದ ಒಳಗೆ ದವಡೆ ಮೂಳೆಗೆ ಹೊಂದಿಕೊಂಡು ಕಿವಿಗಳಿವೆ.

ಧ್ವನಿ ತರಂಗ ಮಿದುಳಿನಲ್ಲಿ ಉಂಟುಮಾಡುವ ಕಂಪನವನ್ನು ಹಾವು ಒಳಕಿವಿಯಲ್ಲಿ ಗ್ರಹಿಸುತ್ತದೆ.

ಹಾವುಗಳು ಗಾಳಿಯಲ್ಲಿನ ಕಂಪನಗಳ ಮೂಲಕ ಶಬ್ದದ ಆವರ್ತನವನ್ನು ಹಿಡಿಯುತ್ತವೆ.

ಕ್ವೀನ್ಸ್‌ಲ್ಯಾಂಡ್ ವಿವಿ ಪ್ರಕಾರ, ಹಾವು ನೆಲದ ಕಂಪನ, ಗಾಳಿ ಅಲೆ ಮೂಲಕ ಶಬ್ದ ಗ್ರಹಿಸುತ್ತಸೆ.

ಪ್ರತಿ ಶಬ್ದವು ವಿಭಿನ್ನ ಆವರ್ತನ ಹೊಂದಿದ್ದು, ಮನುಷ್ಯ ಧ್ವನಿಯನ್ನು ಅದರಿಂದ ಗುರುತಿಸುತ್ತದೆ

ಹಾವಿನ ನಡವಳಿಕೆ ತಜ್ಞ ಮೃದುಲ್ ವೈಭವ್ ಪ್ರಕಾರ, ನಾಗರ ಹಾವು ಶಬ್ದ ಕೇಳಿ ಜಾಗೃತವಾಗುತ್ತದೆ 

ನಾಗರ ಹಾವಿನ ಸಮೀಪದಲ್ಲಿ ಶಬ್ದವಾದರೆ ಅದು ಅಪಾಯಕಾರಿಯಾಗಬಲ್ಲದು

ಇತರ ಅನೇಕ ಜಾತಿಯ ಹಾವುಗಳು ಶಬ್ದವನ್ನು ಕೇಳಿದಾಗ ವಿರುದ್ಧ ದಿಕ್ಕಿನಲ್ಲಿ ಓಡುತ್ತವೆ

ಆದರೆ ವೋಮಾ ಹೆಬ್ಬಾವು ಶಬ್ದದ ಬಳಿ ತಲುಪುತ್ತದೆ

ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ

slurrp