ಬಾಳೆಹಣ್ಣನ್ನು ಹೀಗೆ ತಿಂದ್ರೆ ತೂಕ ಹೆಚ್ಚಾಗುತ್ತೆ, ಟ್ರೈ ಮಾಡಿ ನೋಡಿ.

freepik

By Priyanka Gowda
Sep 28, 2024

Hindustan Times
Kannada

ಕೆಲವರಿಗೆ ತೂಕ ಇಳಿಕೆ ಚಿಂತೆ ಆದ್ರೆ ಇನ್ನೂ ಕೆಲವರಿಗೆ ತೂಕ ಹೆಚ್ಚು ಮಾಡುವುದು ಹೇಗೆ ಎಂಬ ಚಿಂತೆ. ತೂಕ ಹೆಚ್ಚಿಸಲು ಪ್ರಯತ್ನಿಸುತ್ತಿರುವವರು ಬಾಳೆಹಣ್ಣು ಸೇವಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು.

freepik

ಪ್ರತಿ ಋತುವಿನಲ್ಲೂ ಸುಲಭವಾಗಿ ಸಿಗುವ ಬಾಳೆಹಣ್ಣಿನ ಸೇವನೆಯಿಂದ ತೂಕವನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಪಡೆಯಬಹುದು.

freepik

ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಫೋಲಿಕ್ ಆಮ್ಲ, ಖನಿಜಗಳು, ಪ್ರೋಟೀನ್ ಹಾಗೂ ಖನಿಜಗಳಿಂದ ಸಮೃದ್ಧವಾಗಿದೆ. ಪ್ರತಿನಿತ್ಯ ಬಾಳೆಹಣ್ಣಿನ ಸೇವನೆಯಿಂದ ತೂಕ ಹೆಚ್ಚಿಸಿಕೊಳ್ಳಬಹುದು.

freepik

ಬಾಳೆಹಣ್ಣಿನ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಹೇಗೆಲ್ಲಾ ಸೇವಿಸಬಹುದು ಅನ್ನೋದು ಇಲ್ಲಿದೆ:

freepik

ಬಾಳೆಹಣ್ಣನ್ನು ಸಣ್ಣಗೆ ಕತ್ತರಿಸಿ ಮೊಸರಿನ ಜತೆ ಮಿಶ್ರಣ ಮಾಡಿ ಸೇವಿಸುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ.

freepik

ಹಾಲು ಕುಡಿದು ಬಾಳೆಹಣ್ಣು ಸೇವಿಸುವುದರಿಂದ ತೂಕ ಹೆಚ್ಚಿಸಲು ಸಹಕಾರಿಯಾಗಿದೆ. ಕ್ಯಾಲೋರಿಗಳಲ್ಲಿ ಸಮೃದ್ಧವಾಗಿರುವ ಇವು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.

freepik

ಬಾಳೆಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಇದಕ್ಕೆ ಒಣಹಣ್ಣುಗಳನ್ನು ಮಿಶ್ರಣ ಮಾಡಿ ಸೇವಿಸಬಹುದು. ಇದರಿಂದ ತೂಕ ಹೆಚ್ಚಳವಾಗಲು ಸಹಕಾರಿ.

freepik

ಬೆಣ್ಣೆಗೆ ಬಾಳೆಹಣ್ಣನ್ನು ಕತ್ತರಿಸಿ ಮಿಶ್ರಣ ಮಾಡಿ ಸೇವಿಸಬೇಕು. ಹೀಗೆ ಮಾಡುವುದರಿಂದ ತೂಕ ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

freepik

ಮಾವಿನಹಣ್ಣಿನ ಋತುವಿನಲ್ಲಿ ಬಾಳೆಹಣ್ಣು, ಮಾವಿನಹಣ್ಣಿನ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದು. ಇದೀಗ ಮಾವಿನಹಣ್ಣು ಸಿಗುವುದಿಲ್ಲವಾದರಿಂದ ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿ ಸೇವಿಸಬಹುದು.

freepik

ವಿಶೇಷ ಸೂಚನೆ: ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ರೀತಿಯ ವಿಶೇಷ ಮಾಹಿತಿಗಾಗಿ ತಜ್ಞ ವೈದ್ಯರ ಸಲಹೆ ಪಡೆಯಬಹುದು.

freepik

ಮಾರ್ಟಿನ್ ಪದದ ರಿಯಲ್ ಅರ್ಥವಿದು