Fake GST Bill: ನಕಲಿ ಜಿಎಸ್‌ಟಿ ಬಿಲ್‌ ಪತ್ತೆ ಹೇಗೆ? 

By Praveen Chandra B
Sep 13, 2024

Hindustan Times
Kannada

ನಿಮಗೆ ನೀಡಿರುವ ಜಿಎಸ್‌ಟಿ ಬಿಲ್‌ ಅಸಲಿಯೋ, ನಕಲಿಯೋ ಎಂದು ತಿಳಿಯಲು ಸಾಕಷ್ಟು ದಾರಿಗಳಿವೆ. 

ಮೊದಲಿಗೆ ಪೂರೈಕೆದಾರರ ಜಿಎಸ್‌ಟಿಎನ್‌ (ಐಡೆಂಟೆಂಟಿಫಿಕೇಷನ್‌ ಸಂಖ್ಯೆ) ಎಂಬ 15 ಡಿಜಿಟ್‌ ಸಂಖ್ಯೆಯನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ಖಚಿತಪಡಿಸಿಕೊಳ್ಳಿ.

ಇದಾದ ಬಳಿಕ ಇನ್‌ವಾಯ್ಸ್‌ ಸಂಖ್ಯೆಯನ್ನು ದೃಢೀಕರಿಸಿಕೊಳ್ಳಿ. ಇನ್‌ವಾಯ್ಸ್‌ ಸಂಖ್ಯೆ ಜಿಎಸ್‌ಟಿ ಬಿಲ್‌ನಲ್ಲಿ ನಮೂದಿಸಿದ ದಿನಾಂಕಕ್ಕೆ ತಕ್ಕಂತೆ ಇರುತ್ತದೆ.

ಜಿಎಸ್‌ಟಿ ದರಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗಿರುವುದೇ ಎಂದು ಖಚಿತಪಡಿಸಿಕೊಳ್ಳಿ. ಜಿಎಸ್‌ಟಿ ವೆಬ್‌ ಸೈಟ್‌ನಲ್ಲಿರುವ ಜಿಎಸ್‌ಟಿ ಕ್ಯಾಲ್ಕ್ಯುಲೇಟರ್‌ ಬಳಸಿ.

ಜಿಎಸ್‌ಟಿ ಬಿಲ್‌ನಲ್ಲಿ ಪೂರೈಕೆದಾರರ ಅಥವಾ ಅಧಿಕೃತ ಪ್ರತಿನಿಧಿಗಳ ಸಹಿ ಇರುತ್ತದೆ. ಅದನ್ನೂ ಖಚಿತಪಡಿಸಿ.

ಜಿಎಸ್‌ಟಿ ಪೋರ್ಟಲ್‌ನಲ್ಲಿ ಪೂರೈಕೆದಾರರ ಟ್ಯಾಕ್ಸ್‌ ಪೇಮೆಂಟ್‌ ಸ್ಟೇಟಸ್‌ ಖಾತ್ರಿ ಪಡಿಸಿಕೊಳ್ಳಬಹುದು.

ಫೇಕ್‌ ಜಿಎಸ್‌ಟಿ ಬಿಲ್‌ ಎಂದು ಖಚಿತವಾದರೆ ಜಿಎಸ್‌ಟಿ ಪೋರ್ಟಲ್‌ ಅಥವಾ ಅಲ್ಲಿರುವ ಟೂಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ.

10 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ 15 ಸ್ಮಾರ್ಟ್‌ಫೋನ್‌ಗಳಿವು