ಮರೆವು ಹೆಚ್ಚಾಗಿದ್ಯ? ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

By Praveen Chandra B
Nov 12, 2024

Hindustan Times
Kannada

ಪ್ರತಿದಿನ ಹೊಸತು ಕಲಿಯುತ್ತಿರಬೇಕು, ಕಲಿತದ್ದು ನೆನಪಿನಲ್ಲಿ ಇರಲು ನೆನಪಿನ ಶಕ್ತಿ ಉತ್ತಮವಾಗಿರಬೇಕು.

ಮರೆವು ಹೆಚ್ಚಾಗಿದೆ ಎನ್ನುವವರು ಒಂದು ಶೆಡ್ಯೂಲ್‌ ರಚಿಸಲು ಆರಂಭಿಸಿ, ಇಂದು ಮಾಡಬೇಕಾದ ಕೆಲಸಗಳು, ನಾಳೆ ಮಾಡಬೇಕಾದ ಕೆಲಸಗಳನ್ನು ಬರೆದಿಡಿ.

ನೀವು ಹೊಸ ಕೌಶಲ ಕಲಿಯುವ ಸಮಯದಲ್ಲಿ ಪುಸ್ತಕವೊಂದರಲ್ಲಿ ನೋಟ್ಸ್‌ ಮಾಡಿಕೊಳ್ಳಿ.

ಪರೀಕ್ಷೆಗೆ ಸಿದ್ಧತೆ ಮಾಡುವಾಗ ಓದಿದ್ದನ್ನು ಮನನ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ, ಬಿಡುವಿನ ವೇಳೆಯಲ್ಲಿ ಓದಿದ್ದನ್ನು ನೆನಪಿಸಿಕೊಳ್ಳಲು ಯತ್ನಿಸಿ.

ಒಮ್ಮೆ ಓದಿದ ಬಳಿಕ ಎಷ್ಟು ನೆನಪಿದೆ ಎಂದು ತಿಳಿಯಲು ನಿಮ್ಮನ್ನೇ ನೀವು ಟೆಸ್ಟ್‌ ಮಾಡಿ. ಪುಸ್ತಕ ಮಡುಚಿಟ್ಟು ಪೇಪರ್‌ನಲ್ಲಿ ಎಲ್ಲವನ್ನೂ ನೆನಪಿಸಿಕೊಂಡು ಬರೆಯಲು ಯತ್ನಿಸಿ.

ಪ್ರತಿನಿತ್ಯ ವ್ಯಾಯಾಮ ಮಾಡಿ. ದೈಹಿಕ ಚಟುವಟಿಕೆ ಉತ್ತಮವಾಗಿರಲಿ.

ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಿ. ಚೆನ್ನಾಗಿ ನಿದ್ದೆ ಮಾಡಿ. ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ

ಆಗಾಗ ಬ್ರೇಕ್‌ ತೆಗೆದುಕೊಳ್ಳಿ. ಮಿದುಳಿಗೂ ಸಾಕಷ್ಟು ವಿಶ್ರಾಂತಿ ಬೇಕು.

ಒಂದು ಬಾರಿ ಒಂದು ಕೆಲಸದ ಕಡೆಗೆ ಗಮನ ನೀಡಿ. ಮಲ್ಟಿ ಟಾಸ್ಕಿಂಗ್‌ ಬೇಡ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ