ವಯಸ್ಸು 50 ರ ಸನಿಹ ಇದ್ರೂ  25 ರ ಮೈ ಮಾಟ ಹೇಗೆ ಸಾಧ್ಯ

Shipa Shetty

By Umesh Kumar S
Sep 14, 2024

Hindustan Times
Kannada

ನೀವೂ ಹೀಗೆ ಮೈಮಾಟ ಕಾಯ್ದುಕೊಳ್ಳಬೇಕಾದರೆ ಈ 10 ಆಹಾರ ತಿನ್ನಲೇಬೇಡಿ 

Wikipedia

ವಯಸ್ಸಾಗುವಿಕೆ ಪ್ರಕೃತಿ ಸಹಜ ಮತ್ತು ಸಾಮಾನ್ಯ ಕ್ರಿಯೆ. ಆದರೆ, 25 ವಯಸ್ಸಾಗುತ್ತಲೇ 50 ವರ್ಷದವರಂತಾದರೆ? 

Pexel

ಹೌದು ಅಂತಹ ಕೆಲವರನ್ನು ನಾವು ನೋಡಿಯೇ ಇರುತ್ತೇವೆ. ಕಾರಣ ಕೆಲವು ಆಹಾರಗಳು. ಈ ಪೈಕಿ 10 ಆಹಾರಗಳಿವು

Pexel

ಸಿಹಿ ತಿನಿಸುಗಳು - ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸಿ ಗ್ಲೈಕೇಶನ್‌ ಪ್ರಕ್ರಿಯೆಗೆ ವೇಗ ನೀಡುತ್ತದೆ. ಚರ್ಮದ ಕೊಲಾಜೆನ್‌, ಎಲಾಸ್ಟಿನ್‌ಗೆ ಹಾನಿ ಎಸಗುತ್ತದೆ. 

Pixabay

ಆ ಮೂಲಕ ಚರ್ಮದ ಎಲಾಸ್ಟಿಸಿಟಿ ಕಳೆದುಕೊಳ್ಳುವಂತೆ ಮಾಡಿ ಅಕಾಲಿಕ ಸುಕ್ಕು ಮೂಡಿಸುತ್ತದೆ. 

Pexel

ಕಾಫಿ - ಬೆಳಗ್ಗೆ ಎದ್ದು ಕಾಫಿ ಕುಡಿಯದೆ ದಿನ ಶುರುವಾಗಲ್ಲ. ಇದು ಮೂತ್ರ ವಿಸರ್ಜನೆ ಹೆಚ್ಚಿಸಿ, ಚರ್ಮದ ನೀರಿನ ಅಂಶ ಕಡಿಮೆ ಮಾಡುತ್ತದೆ. 

Pexel

ಕರಿದ ಆಹಾರಗಳು - ಕರುಂಕುರುಂ ಆಗಿರುವ ಕರಿದ ಆಹಾರ ರುಚಿಯಾಗಿರಬಹುದು. ಆದರೆ ಅವುಗಳಲ್ಲಿರುವ ಟ್ರಾನ್ಸ್‌ಫ್ಯಾಟ್‌ ಅಪಾಯಕಾರಿ.

Pexel

ಟ್ರಾನ್ಸ್‌ ಫ್ಯಾಟ್‌ ಇರುವ ಆಹಾರಗಳು ನಿಮ್ಮ ಚರ್ಮದ ಕೊಲಾಜೆನ್ ಅನ್ನು ಹಾನಿಗೀಡುಮಾಡಿ ಚರ್ಮ ಸುಕ್ಕಾಗುವಂತೆ ಮಾಡುತ್ತದೆ. 

Pexel

ಸ್ಪೈಸಿ ಫುಡ್ - ಖಾರ ಖಾರ ಆಹಾರ ಸೇವನೆ ಕೂಡ ಅಕಾಲಿಕ ವೃದ್ಧಾಪ್ಯವನ್ನು ತರುತ್ತದೆ. 

Pexel

ಉಪ್ಪು ಉಪ್ಪಾದ ಆಹಾರ- ಉಪ್ಪು ಉಪ್ಪಾದ ಆಹಾರ ಸೇವನೆಯು ಶರೀರದ ನೀರಿನ ಅಂಶ ಕಡಿಮೆ ಮಾಡುತ್ತದೆ.

Pexel

ಕಣ್ಣಿನ ಸುತ್ತ ಚರ್ಮದ ಕಾಂತಿ ಕುಗ್ಗಿಸುತ್ತದೆ. ಅಲ್ಲದೆ, ಇದು ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆಗೂ ಕಾರಣವಾಗುತ್ತದೆ. 

Pixabay

ಮದ್ಯ ಸೇವನೆ - ಇದು ಚರ್ಮ ಮತ್ತು ಶರೀರವನ್ನು ನಿರ್ಜಲಗೊಳಿಸುವುದಲ್ಲದೆ, ರಕ್ತ ನಾಳಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

Pexel

ಸಂಸ್ಕರಿತ ಮಾಂಸ ಸೇವನೆಯಿಂದ ಚರ್ಮದ ಕೊಲಾಜೆನ್ ದುರ್ಬಲವಾಗಿ ಅಕಾಲಿಕ ವೃದ್ಧಾಪ್ಯ ತರಬಹುದು. 

Pexel

ಡೇರಿ ಉತ್ಪನ್ನಗಳು - ಕೆಲವು ಡೇರಿ ಉತ್ಪನ್ನಗಳು ಚರ್ಮದ ಸಮಸ್ಯೆಗಳಿಗೆ ಕಾರಣವಾಗಿ ಅದರ ಕಾಂತಿ ಕುಗ್ಗುವಂತೆ ಮಾಡಬಹುದು. 

Pexel

ರೀಫೈನ್ಡ್‌ ಕಾರ್ಬೊಹೈಡ್ರೇಟ್‌ ಹೆಚ್ಚಿರುವ ವೈಟ್ ಬ್ರೆಡ್‌, ಪಾಸ್ತಾ, ಪ್ಯಾಸ್ಟರೀಸ್‌ ಮುಂತಾದವು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತವೆ. 

Pexel

ರೀಫೈನ್ಡ್‌ ಕಾರ್ಬೊಹೈಡ್ರೇಟ್‌ ಹೆಚ್ಚಿರುವ ಆಹಾರಗಳು ಚರ್ಮದ ಕಾಂತಿ ಕುಗ್ಗಿಸಿ, ಬಹುಬೇಗನೆ ವೃದ್ಧಾಪ್ಯ ಮೂಡಿಸುತ್ತವೆ. 

Pixabay

ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು 

Pexel