ನಿರ್ಮಲಾ ಸೀತಾರಾಮನ್ ಘೋಷಿಸಿದ್ದ 5 ಆದಾಯ ತೆರಿಗೆ ನಿಯಮಗಳಿವು
By Jayaraj Jul 23, 2024
Hindustan Times Kannada
ಹೊಸ ತೆರಿಗೆ ಸ್ಲ್ಯಾಬ್: 2023ರಲ್ಲಿ, ಸೀತಾರಾಮನ್ ಅವರು ಹೊಸ ತೆರಿಗೆ ಪದ್ಧತಿ ಘೋಷಿಸಿದರು. ಹೊಸ ತೆರಿಗೆ ಪದ್ಧತಿಯಲ್ಲಿ ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಯ್ತು.
ಹೊಸ ತೆರಿಗೆ ಪದ್ಧತಿ ಡೀಫಾಲ್ಟ್ ಅಳವಡಿಕೆ: ಹೊಸ ತೆರಿಗೆ ಪದ್ಧತಿಯು ಈಗ ಡೀಫಾಲ್ಟ್ ತೆರಿಗೆ ಪದ್ಧತಿಯಾಗಲಿದೆ ಎಂದು ಸೀತಾರಾಮನ್ ಘೋಷಿಸಿದರು. ಹೊಸ ತೆರಿಗೆ ಪದ್ಧತಿಯನ್ನು 2020 ರಲ್ಲಿ ಪರಿಚಯಿಸಲಾಯಿತು
pixabay
ರಿಬೇಟ್‌ನಲ್ಲಿ ಬದಲಾವಣೆ: 5 ಲಕ್ಷ ಆದಾಯದ ಜನರು ಎರಡೂ ತೆರಿಗೆ ಪದ್ಧತಿ ಅಡಿಯಲ್ಲಿ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ ಬಜೆಟ್ ಮಿತಿಯನ್ನು 7 ಲಕ್ಷಕ್ಕೆ ಏರಿಸಲಾಗಿದೆ. ಅಂದರೆ 7 ಲಕ್ಷದವರೆಗೆ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ.
pixabay
ಸಂಬಳ ಪಡೆಯುವ ವರ್ಗ ಮತ್ತು ಪಿಂಚಣಿದಾರರಿಗೆ: ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಪರಿಚಯಿಸಿದೆ. 7.5 ಲಕ್ಷದವರೆಗೆ ಸ್ಯಾಲರಿ ಪಡೆಯುವವರು ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ತೆರಿಗೆ ಪಾವತಿಸಬೇಕಾಗಿಲ್ಲ.
pixabay
ಲೀವ್ ಎನ್‌ಕ್ಯಾಶ್‌ಮೆಂಟ್: ಸರ್ಕಾರೇತರ ವೇತನದಾರರ ನಿವೃತ್ತಿಯ ಮೇಲಿನ ತೆರಿಗೆ ವಿನಾಯಿತಿಗಾಗಿ ರಜೆ ಎನ್‌ಕ್ಯಾಶ್‌ಮೆಂಟ್ ಮಿತಿಯನ್ನು 3 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ.