ಐದು ವಿಕೆಟ್ ಪಡೆದು ದಿಗ್ಗಜರ ದಾಖಲೆ ಮುರಿದ ಜಡೇಜಾ
By Prasanna Kumar P N
Nov 01, 2024
Hindustan Times
Kannada
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯವು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ.
ಪಂದ್ಯದಲ್ಲಿ ರವೀಂದ್ರ ಜಡೇಜಾ ಐದು ವಿಕೆಟ್ ಮಿಂಚಿದರು. 22 ಓವರ್ಗಳಲ್ಲಿ 65 ರನ್ ನೀಡಿ ಐವರನ್ನು ಔಟ್ ಮಾಡಿದರು.
ಕಿವೀಸ್ ಎದುರು 5 ವಿಕೆಟ್ ಗುಚ್ಛದೊಂದಿಗೆ ಜಡೇಜಾ ವಿಶೇಷ ದಾಖಲೆಯೊಂದನ್ನು ಬರೆಯುವಲ್ಲಿ ಯಶಸ್ವಿಯಾದರು.
ಇಶಾಂತ್ ಶರ್ಮಾ, ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಭಾರತದ ಅಧಿಕ ವಿಕೆಟ್ ಪಡೆದ ಟಾಪ್-5 ಬೌಲರ್ಗಳ ಪಟ್ಟಿಗೆ ಸೇರ್ಪಡೆಯಾದರು.
ಟೆಸ್ಟ್ನಲ್ಲಿ ಭಾರತದ ಪರ ಹೆಚ್ಚು ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದು, ಒಟ್ಟು 619 ವಿಕೆಟ್ ಕಿತ್ತಿದ್ದಾರೆ.
ಆರ್ ಅಶ್ವಿನ್ 533 ವಿಕೆಟ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಕಪಿಲ್ ದೇವ್ 434 ವಿಕೆಟ್ ಉರುಳಿಸಿ 3ನೇ ಸ್ಥಾನದಲ್ಲಿದ್ದಾರೆ.
4ನೇ ಸ್ಥಾನದಲ್ಲಿ ಹರ್ಭಜನ್ ಸಿಂಗ್ ಇದ್ದು 417 ವಿಕೆಟ್ ಉರುಳಿಸಿದ್ದಾರೆ. ಇದೀಗ 5 ವಿಕೆಟ್ ಉರುಳಿಸಿರುವ ಜಡ್ಡು 314 ವಿಕೆಟ್ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.
ಆ ಮೂಲಕ ತಲಾ 311 ವಿಕೆಟ್ ಉರುಳಿಸಿರುವ ಇಶಾಂತ್ ಶರ್ಮಾ, ಕಪಿಲ್ ದೇವ್ ದಾಖಲೆಯನ್ನು ಜಡ್ಡು ಮುರಿದಿದ್ದಾರೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ