ಭಾರತ ಮತ್ತು ಪಾಕಿಸ್ತಾನ ಬೇರ್ಪಡಿಸಲು ವಾದಿಸಿದ ವಕೀಲ ಯಾರು?
By Prasanna Kumar P N Nov 02, 2024
Hindustan Times Kannada
ಬ್ರಿಟಿಷರಿಂದ ಸ್ವಾತ್ರಂತ್ರ್ಯ ಪಡೆದ ನಂತರ ಭಾರತ 2 ಭಾಗವಾಯಿತು. ಬೇರ್ಪಟ್ಟ ಬಳಿಕ ಪಾಕಿಸ್ತಾನ ಎಂದು ಹೆಸರಿನಿಂದ ಹೊಸ ದೇಶ ರಚಿಸಲಾಯಿತು.
ಆದರೆ, ಭಾರತ-ಪಾಕಿಸ್ತಾನವನ್ನು ಬೇರ್ಪಡಿಸಲು ನ್ಯಾಯಾಲಯದಲ್ಲಿ ವಾದಿಸಿದ ವಕೀಲ ಯಾರೆಂದು ನಿಮಗೆ ಗೊತ್ತಾ? ಆತನ ವಿವರ ಇಲ್ಲಿದೆ.
ಇಂಡೋ-ಪಾಕ್ ನಡುವಿನ ಗಡಿರೇಖೆಯನ್ನು ಲಂಡನ್ ವಕೀಲ ಸಿರಿಲ್ ರಾಡ್ಕ್ಲಿಫ್ ನಿರ್ಧರಿಸಿದರು. ಇದೇ ಕಾರಣಕ್ಕೆ ವಿಭಜನಾ ರೇಖೆಯನ್ನು ಎಂದು ಕರೆಯಲಾಗುತ್ತದೆ.
ಬ್ರಿಟಿಷ್ ಸಂಸತ್ತು 1947ರ ಜುಲೈ 18ರಂದು ಭಾರತೀಯ ಸ್ವಾತಂತ್ರ್ಯ ಕಾಯಿದೆಯನ್ನು ಅಂಗೀಕರಿಸಿತು. ಇದು ವಿಭಜನೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸಿತು.
ರಾಡ್ಕ್ಲಿಫ್ ರೇಖೆಯು ಪಂಜಾಬ್ ಮತ್ತು ಬಂಗಾಳದ ಪ್ರಾಂತ್ಯಗಳನ್ನು ಪ್ರತ್ಯೇಕ ಪ್ರದೇಶಗಳಾಗಿ ವಿಂಗಡಿಸಿತು. ಸ್ವಾತಂತ್ರ್ಯಕ್ಕೂ ಮುನ್ನ ರಾಡ್ಕ್ಲಿಫ್ರನ್ನು ಗಡಿ ಆಯೋಗದ ಅಧ್ಯಕ್ಷರನ್ನಾಗಿ ಬ್ರಿಟನ್ ನೇಮಿಸಿತ್ತು.
ಗಡಿ ವಿಭಜನೆಗೆ ವಾದಿಸಿದ ಬ್ರಿಟಿಷ್ ವಕೀಲ ರಾಡ್ಕ್ಲಿಫ್ ಅವರು ಈ ಹಿಂದೆ ಅವರೆಂದಿಗೂ ಭಾರತಕ್ಕೆ ಬಂದವರೇ ಅಲ್ಲ. ಈ ಬಗ್ಗೆ ಯಾವುದೇ ಜ್ಞಾನ ಹೊಂದಿರಲಿಲ್ಲ.
ಡಿವಿಷನ್ ಲೈನ್ ಮಾಡಲು ರಾಡ್ಕ್ಲಿಫ್ಗೆ ಕೇವಲ 5 ವಾರಗಳ ಸಮಯ ನೀಡಲಾಗಿತ್ತು.
ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮಾತೃಭೂಮಿಗಾಗಿ ಮುಹಮ್ಮದ್ ಅಲಿ ಜಿನ್ನಾ ಪ್ರಮುಖ ಪಾತ್ರವಹಿಸಿದ್ದರು.