ಭಾರತದ ಬಜೆಟ್‌ ಬಗ್ಗೆ ತಿಳಿಯಲೇಬೇಕಾದ ಕುತೂಹಲಕಾರಿ ವಿಷಯಗಳಿವು

By Jayaraj
Jul 22, 2024

Hindustan Times
Kannada

ಭಾರತದ ಮೊದಲ ಕೇಂದ್ರ ಬಜೆಟ್ ಮಂಡಿಸಿದವರು ಹಣಕಾಸು ಸಚಿವ ಆರ್‌ಕೆ ಷಣ್ಮುಖಂ ಚೆಟ್. (ನವೆಂಬರ್ 26, 1947)

PTI

ಪ್ರಧಾನ ಮಂತ್ರಿಗಳಾಗಿ ಬಜೆಟ್‌ ಮಂಡಿಸಿರುವುದು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಮಾತ್ರ.

ಬಜೆಟ್ ಪ್ರತಿಗಳ ಮುದ್ರಣವನ್ನು 1950ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ ಭಾರತಕ್ಕೆ ಸ್ಥಳಾಂತರಿಸಲಾಯಿತು.

pixabay

ಮೊರಾರ್ಜಿ ದೇಸಾಯಿ ಅವರು ಓಟ್ಟು 10 ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ.

PTI

1970ರಲ್ಲಿ ಬಜೆಟ್ ಮಂಡಿಸಿದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾಗಾಂಧಿ.

PTI

1997ರಲ್ಲಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಅಧಿಕಾರಾವಧಿಯಲ್ಲಿ ಬಜೆಟ್ ಮಂಡನೆಯನ್ನು ಮೊದಲ ಬಾರಿಗೆ ನೇರಪ್ರಸಾರ ಮಾಡಲಾಯಿತು.

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017 ರಲ್ಲಿ ಬಜೆಟ್‌ ಮಂಡನೆ ದಿನವನ್ನು ಫೆಬ್ರವರಿಯ ಕೊನೆಯ ಕೆಲಸದ ದಿನದಿಂದ ಫೆಬ್ರವರಿ 1ಕ್ಕೆ ಬದಲಾಯಿಸಿದರು.

PTI

1999ರಲ್ಲಿ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಮಂಡನೆ ಸಮಯವನ್ನು ಸಂಜೆ 5ರಿಂದ ಬೆಳಿಗ್ಗೆ 11ಕ್ಕೆ ಬದಲಾಯಿಸಿದರು.

PTI

ಸುವ್ಯವಸ್ಥಿತ ಆಡಳಿತಕ್ಕಾಗಿ 2017ರಲ್ಲಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಬಜೆಟ್‌ ಅನ್ನು ಸಂಯೋಜಿಸಲಾಯ್ತು.

ANI

2021ರ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಕಾಗದರಹಿತ ಬಜೆಟ್ ಮಂಡಿಸಿದರು.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ