ಬಜೆಟ್ ತಿಳಿಯಲು ಈ ಪದಗಳ ಅರ್ಥ ಗೊತ್ತಿರಬೇಕು
By Jayaraj
Jul 22, 2024
Hindustan Times
Kannada
ಬಜೆಟ್ ಅಂದಾಜು: ಮುಂಬರುವ ಹಣಕಾಸು ವರ್ಷಕ್ಕಾಗಿ ಸಚಿವಾಲಯ ಅಥವಾ ಯೋಜನೆಗಾಗಿ ಬಜೆಟ್‌ನಲ್ಲಿ ನಿಗದಿಪಡಿಸಲಾದ ಹಣ.
ವಿತ್ತೀಯ ಕೊರತೆ: ಸರ್ಕಾರದ ಒಟ್ಟು ಖರ್ಚು ಮತ್ತು ಸಾಲವನ್ನು ಹೊರತುಪಡಿಸಿ ಒಟ್ಟು ಬಂಡವಾಳ ಸ್ವೀಕೃತಿಗಳ ನಡುವಿನ ಅಂತರ.
ಹಣಕಾಸು ಮಸೂದೆ: ಹೊಸ ತೆರಿಗೆ ವ್ಯವಸ್ಥೆ ಜಾರಿಗೊಳಿಸಲು ಅಥವಾ ಪ್ರಸ್ತುತ ತೆರಿಗೆ ವ್ಯವಸ್ಥೆಗೆ ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಪರಿಚಯಿಸಲಾಗುವ ಪ್ರಸ್ತಾವನೆ.
ಪರೋಕ್ಷ ತೆರಿಗೆ: ಸರಕು ಮತ್ತು ಸೇವೆಗಳ ಮೇಲೆ ಗ್ರಾಹಕರು ಮೇಲೆ ವಿಧಿಸಲಾಗುವ ಜಿಎಸ್‌ಟಿ ಮತ್ತು ಕಸ್ಟಮ್ಸ್ ಸುಂಕದಂತಹ ತೆರಿಗೆಗಳು
ಹಣದುಬ್ಬರ: ಸರಕುಗಳು, ಸೇವೆಗಳ ಬೆಲೆಗಳು ಹೆಚ್ಚಾಗುವ ದರ. ಅಂದರೆ ಖರೀದಿ ಸಾಮರ್ಥ್ಯದ ಕುಸಿತ.
ಬಂಡವಾಳ ವೆಚ್ಚ: ಕಟ್ಟಡ, ರಸ್ತೆಯಂತಹ ಸ್ಥಿರಾಸ್ಥಿಗಳ ಅಭಿವೃದ್ಧಿ, ಸ್ವಾಧೀನ ಅಥವಾ ನಿರ್ವಹಣೆಗೆ ಬಳಸುವ ನಿಧಿ.
ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ): ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದೊಳಗೆ ಉತ್ಪಾದಿಸಲಾದ ಎಲ್ಲಾ ಸರಕುಗಳು ಮತ್ತು ಸೇವೆಗಳ ಒಟ್ಟು ಮೌಲ್ಯ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ): ಸರಕು ಮತ್ತು ಸೇವೆಗಳ ತಯಾರಿಕೆ, ಮಾರಾಟ ಮತ್ತು ಬಳಕೆಯ ಮೇಲೆ ವಿಧಿಸಲಾಗುವ ಸಮಗ್ರ ಪರೋಕ್ಷ ತೆರಿಗೆ.
ಹಣಕಾಸು ನೀತಿ: ಆರ್ಥಿಕ ಬೆಳವಣಿಗೆಯನ್ನು ನಿರ್ವಹಿಸಲು ತೆರಿಗೆ, ಖರ್ಚು ಮತ್ತು ಸಾಲಕ್ಕೆ ಸಂಬಂಧಿಸಿದ ಸರ್ಕಾರದ ಕಾರ್ಯತಂತ್ರಗಳು.
All photos: Pixabay
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ