ಚೈತ್ರ ನವರಾತ್ರಿಯ ದಿನಾಂಕ, ಪೂಜಾ ಸಮಯ

By Rakshitha Sowmya
Mar 28, 2024

Hindustan Times
Kannada

ಹಿಂದೂ ಕ್ಯಾಲೆಂಡರ್‌ ಪ್ರಕಾರ ಚೈತ್ರ ನವರಾತ್ರಿಯು ಏಪ್ರಿಲ್‌ 9ರಿಂದ ಆರಂಭವಾಗಲಿದೆ. 9 ದಿನಗಳ ಈ ಸಂಭ್ರಮವು ಏಪ್ರಿಲ್‌ 17 ರಾಮನವಮಿಯಂದು ಕೊನೆಗೊಳ್ಳುತ್ತದೆ. 

ಚೈತ್ರ ನವರಾತ್ರಿ ಮುಹೂರ್ತವು ಏಪ್ರಿಲ್‌ 8ರಿಂದ ರಾತ್ರಿ 11.50ಕ್ಕೆ ಆರಂಭವಾಗಿ ಏಪ್ರಿಲ್‌ 9 ರಂದು ರಾತ್ರಿ 8.30ಕ್ಕೆ ಕೊನೆಯಾಗಲಿದೆ

ಹಿಂದೂ ಧರ್ಮದಲ್ಲಿ ಚೈತ್ರ ನವರಾತ್ರಿಗೆ ಬಹಳ ಪ್ರಾಮುಖ್ಯತೆ ಇದೆ. ಈ 9 ದಿನಗಳಲ್ಲೂ ವಿಭಿನ್ನವಾಗಿ ನವರಾತ್ರಿ ಆಚರಿಸಲಾಗುತ್ತದೆ. 

ಉದಯ ತಿಥಿಯ ನಂಬಿಕೆಯ ಪ್ರಕಾರ ಚೈತ್ರ ನವರಾತ್ರಿ ಈ ಬಾರಿ ಏಪ್ರಿಲ್‌ 9 ರಿಂದ ಆರಂಭವಾಗಲಿದೆ

ಪಂಚಾಂಗದ ಪ್ರಕಾರ ಈ ಬಾರಿಯ ಚೈತ್ರ ನವರಾತ್ರಿಯಂದು ಕಳಸ ಸ್ಥಾಪನೆಗೆ 50 ನಿಮಿಷಗಳ ಶುಭ ಮುಹೂರ್ತವಿದೆ

ಏಪ್ರಿಲ್‌ 9 ರಂದು ಬೆಳಗ್ಗೆ 6:12ರಿಂದ 10:23ವರೆಗೆ ಕಳಸ ಸ್ಥಾಪಿಸಬಹುದು. 4 ಗಂಟೆ 11 ನಿಮಿಷಗಳ ಈ ಸಮಯವನ್ನು ಸಾಮಾನ್ಯ ಮುಹೂರ್ತ ಎಂದು ಪರಿಗಣಿಸಲಾಗಿದೆ

ಕಳಶ ಸ್ಥಾಪನೆಗೆ ಮಧ್ಯಾಹ್ನ 12:03 ರಿಂದ 12:53ವರೆಗೆ ಸಮಯ ಇದ್ದು ಇದನ್ನು ಅಭಿಜಿನ್‌ ಮುಹೂರ್ತ ಎಂದು ಪರಿಗಣಿಸಲಾಗಿದೆ. 

ಈ ಬಾರಿ ಚೈತ್ರ ನವರಾತ್ರಿಯ ಮೊದಲ ದಿನವೇ ಸರ್ವಾರ್ಥ ಸಿದ್ದಿಯೋಗ, ಅಮೃತಯೋಗದ ಮಂಗಳಕರ ಸಂಯೋಜನೆಯೂ ರೂಪುಗೊಳ್ಳುತ್ತಿದೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ