ಹಿಂದೂ ಕ್ಯಾಲೆಂಡರ್ ಪ್ರಕಾರ ಗಣೇಶ ಚತುರ್ಥಿಯನ್ನ ಪ್ರತಿ ವರ್ಷ ಭಾದ್ರಪದ ಮಾಸದಂದು ಆಚರಿಸಲಾಗುತ್ತದೆ
ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚತುರ್ಥಿ ಆರಂಭವಾದರೆ ಅನಂತ ಚತುರ್ದಶಿಯವರೆಗೂ ಆಚರಿಸಲಾಗುತ್ತದೆ
ಹಬ್ಬದ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ಗಣೇಶನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ
ಈ ಬಾರಿ ಸೆಪ್ಟೆಂಬರ್ 7 ರಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ
ಸೆಪ್ಟೆಂಬರ್ 17, ಮಂಗಳವಾರ ಗಣೇಶ ನಿಮಜ್ಜನ ನಡೆಯಲಿದೆ
ಕೆಲವರು ಬೆಳಗ್ಗೆ ಗಣೇಶನನ್ನು ತಂದು ಪೂಜೆ ಮಾಡಿ ಸಂಜೆ ವೇಳೆಗೆ ನಿಮಜ್ಜನ ಮಾಡಲಿದ್ದಾರೆ
ಗಣೇಶ ಮೂರ್ತಿಯು ಮನೆಯಲ್ಲಿದ್ದಾಗ ನಿಯಮಾನುಸಾರ ಪೂಜೆ ಮಾಡಬೇಕು, ಪ್ರತಿದಿನ ಬೆಳಗ್ಗೆ ಮಡಿಯುಟ್ಟು ಪೂಜೆ ಮಾಡಿ ನೈವೇದ್ಯ ಇಡಬೇಕು
ಮನೆಯ ಈಶಾನ್ಯ ಮೂಲೆಯಲ್ಲಿ ಪೀಠವನ್ನು ಇಟ್ಟು ಅದರಲ್ಲಿ ಗಣೇಶ ವಿಗ್ರಹವನ್ನು ಸ್ಥಾಪಿಸಬೇಕು
ಗಣೇಶ ಪೂಜೆಗೆ ಬೆಳಗ್ಗೆ 11.03 ರಿಂದ ಮದ್ಯಾಹ್ನ 1:34 ವರೆಗೂ ಶುಭ ಮುಹೂರ್ತವಿದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.