ಭಾರತದಲ್ಲಿ ಮಾತ್ರ ಕಂಡುಬರುವ 5 ನಾಯಿ ತಳಿಗಳಿವು
HT
By Umesh Kumar S
Oct 22, 2024
Hindustan Times
Kannada
ಭಾರತದಲ್ಲಿ ಸ್ಥಳೀಯ ಹವಾಮಾನ ಮತ್ತು ಸಂಸ್ಕೃತಿಗೆ ಹೊಂದಿಕೊಳ್ಳುವ ಹಲವಾರು ವಿಶಿಷ್ಟ ನಾಯಿ ತಳಿಗಳಿವೆ.
HT
ಭಾರತದ ಪ್ರಮುಖ ಐದು ನಾಯಿ ತಳಿಗಳನ್ನು ಗಮನಿಸೋಣ
HT
ರಾಜಪಾಳ್ಯಂ- ಇದು ಭಾರತದ ಪ್ರಮುಖ ಬೇಟೆ ನಾಯಿ. ತಮಿಳುನಾಡು ಇದರ ಮೂಲ. ಕಾಡುಹಂದಿ ಬೇಟೆಗೆ ಬಳಸಲಾಗುತ್ತಿತ್ತು
ಎತ್ತರ ಮತ್ತು ದಷ್ಟಪುಷ್ಟ ರಾಜಪಾಳ್ಯಂ ನಾಯಿ ನಿಷ್ಠೆ, ಬುದ್ಧಿವಂತಿಕೆಗೆ ಹೆಸರುವಾಸಿ. ಉತ್ತಮ ಕಾವಲು ನಾಯಿಗಳು.
ಮುಧೋಳ ನಾಯಿ; ಕರ್ನಾಟಕದ ಮುಧೋಳ ಮೂಲದ ನಾಯಿ. ಮುಧೋಳ್ ಹೌಂಡ್ ಎಂದೇ ಗುರುತಿಸೊಂಡ ಬೇಟೆ ನಾಯಿ.
ವೇಗ ಮತ್ತು ಸಹಿಷ್ಣುತೆಗೆ ಹೆಸರುವಾಸಿ ಮುಧೋಳ ನಾಯಿ. ಭಾರತದ ಸೇನೆ ಈ ತೆಳ್ಳಗಿನ ಬೇಟೆ ನಾಯಿ ಪಹರೆ, ಬೇಟೆಗಾಗಿ ಗುರುತಿಸಿದೆ.
ಚಿಪ್ಪಿಪರೈ ನಾಯಿ; ಇದು ತಮಿಳುನಾಡು ಮೂಲದ್ದು. ಭಾರತದ ಇನ್ನೊಂದು ಬೇಟೆ ನಾಯಿ. ತೆಳ್ಳಗಿನ ದೇಹ, ವೇಗಕ್ಕೆ ಹೆಸರುವಾಸಿ.
ಚಿಪ್ಪಿಪರೈ ನಾಯಿ ಬಹಳ ನಿಷ್ಠೆಯುಳ್ಳದ್ದು, ಐತಿಹಾಸಿಕವಾಗಿ ರಾಜಮನೆತನದ ಚಾಕರಿಗೆ ಬಳಕೆಯಾಗುತ್ತಿತ್ತು.
ಭಾರತೀಯ ಪರಿಯಾ ನಾಯಿಗಳು: ಭಾರತದಾದ್ಯಂತ ಕಂಡುಬರುವ ಪ್ರಾಚೀನ, ಬಹು ನಮೂನೆ ನಾಯಿಗಳು.
ವಿಶ್ವದ ಅತ್ಯಂತ ಹಳೆಯ ನಾಯಿ ತಳಿಗಳಲ್ಲಿ ಒಂದು ಪರಿಯಾ ನಾಯಿ.
ಜಮ್ಮು ಮತ್ತು ಕಾಶ್ಮೀರದ ಬಖರ್ವಾಲ್ ನಾಯಿ, ಜಾನುವಾರುಗಳ ರಕ್ಷಣೆಗೆ ಬಳಲ್ಪಡುವ ನಾಯಿ.
ಅಲೆಮಾರಿ ಬುಡಕಟ್ಟು ಜನಾಂಗದವರು ಬಳಸುವ ಗಟ್ಟಿಮುಟ್ಟಾದ ಮತ್ತು ನಿರ್ಭೀತ ತಳಿಯಾಗಿದೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ