ಡಾರ್ಜೆಲಿಂಗ್ ಹಿಮಾಲಯನ್ ರೈಲ್ವೆ: ಟಾಯ್ ಟ್ರೇನ್ ಎಂದು ಕರೆಯಲ್ಪಡುವ ಈ ರೈಲು 1999ರಲ್ಲಿ ಯುನೆಸ್ಕೊ ಹೆರಿಟೇಜ್ ಟ್ಯಾಗ್ ಪಡೆಯಿತು.
ಇದು ಡಾರ್ಜೆಲಿಂಗ್ ಮತ್ತು ನ್ಯೂ ಜಲ್‌ಪೈಗುರಿಯನ್ನು ಸಂಪರ್ಕಿಸುತ್ತದೆ. ಸುಂದರ ಕಾಫಿ ತೋಟಗಳು, ದಟ್ಟಾರಣ್ಯದ ನಡುವೆ ಹಾದು ಹೋಗುತ್ತದೆ.
2004ರಲ್ಲಿ ಮುಂಬೈನ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್ ಕೂಡ ವಿಶ್ವ ಹೆರಿಟೇಜ್ ತಾಣವಾಗಿ ಗುರುತಿಸಲ್ಪಟ್ಟಿತ್ತು.
freepik
ಇದು 19ನೇ ಶತಮಾನದ ರೈಲ್ವೆ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದೆ.
wiki
ನೀಲಗಿರಿ ಮೌಂಟೇನ್ ರೈಲ್ವೆಗೂ 2005ರಲ್ಲಿ ಯುನೆಸ್ಕೊ ಟ್ಯಾಗ್ ದೊರಕಿತು.
ಇದು ಸುಂದರ ಗುಡ್ಡಗಳ ನಡುವೆ ಊಟಿಯಿಂದ ಮೆಟ್ಟುಪುಲಯಂ ಕೂಕನೂರ್ ನಡುವೆ ಸಾಗುತ್ತದೆ. ಈ ರೈಲಲ್ಲಿ ಪ್ರಯಾಣಿಸುವಾಗ ಸುಂದರ ಪೃಕೃತಿಯನ್ನು ಕಣ್ತುಂಬಿಕೊಳ್ಳಬಹುದು.
ಕಲ್ಕ ಶಿಮ್ಲಾ ರೈಲ್ವೆ. ಇದು 96.6 ಕಿ.ಮೀ. ಉದ್ದದ ನ್ಯಾರೋ ಗೇಜ್ ರೈಲ್ವೆಯಾಗಿದೆ. ಕಲ್ಕಾ ಮತ್ತು ಶಿಮ್ಲಾ ಗುಡ್ಡಗಾಡಿನ ನಡುವೆ ಸಾಗುತ್ತದೆ. ಇದಕ್ಕೆ 2008ರಲ್ಲಿ ಯುನೆಸ್ಕೊ ಟ್ಯಾಗ್ ದೊರಕಿದೆ.