ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಹರಾಜು ನಡೆಯಲಿದೆ.
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುವ ಹರಾಜಿನಲ್ಲಿ 574 ಆಟಗಾರರ ಪೈಕಿ 204 ಆಟಗಾರರು ಮಾತ್ರ ಖರೀದಿಯಾಗಲಿದ್ದಾರೆ.
ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಪಟ್ಟಿಯಲ್ಲಿ ಪ್ರಮುಖ ಹೆಸರುಗಳೇ ಮಿಸ್ ಆಗಿವೆ. ಅವರ ಯಾರೆಂಬುದು ಇಲ್ಲಿದೆ ವಿವರ.
ಆಸ್ಟ್ರೇಲಿಯಾದ ಸ್ಟಾರ್ ಕ್ಯಾಮರೂನ್ ಗ್ರೀನ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಳೆದ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದರು. ಬೆನ್ನುನೋವಿನಿಂದ 6 ತಿಂಗಳು ಕ್ರಿಕೆಟ್ನಿಂದ ದೂರ ಇರಲಿದ್ದಾರೆ.
ಹರಾಜಿನಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಹೆಸರಿಲ್ಲ. 2023ರಲ್ಲಿ ಕೊನೆಯದಾಗಿ ಸಿಎಸ್ಕೆ ಪರ ಆಡಿದ್ದರು. 2 ಪಂದ್ಯಗಳಲ್ಲಿ 15 ರನ್ ಗಳಿಸಿ ಗಾಯಗೊಂಡು ಬೆಂಚ್ ಕಾದಿದ್ದರು.
ಹರಾಜು ಪಟ್ಟಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೆಸರು ಕೂಡ ಕಾಣೆಯಾಗಿದೆ. 2022ರ ಹರಾಜಿನಲ್ಲಿ ಮುಂಬೈ, ಖರೀದಿಸಿತ್ತು. 2023ರಲ್ಲಿ ಒಂದೆರಡು ಪಂದ್ಯ ಆಡಿ ಗಾಯಗೊಂಡಿದ್ದರು.
ಕಳೆದ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಶಿಖರ್ ಧವನ್ ಗಾಯಗೊಂಡು 9 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ, ಇದೀಗ ಅವರು ಹರಾಜು ಪಟ್ಟಿಯಲ್ಲಿಲ್ಲ.
ಇಂಗ್ಲೆಂಡ್ ತಂಡದ ಜೇಸನ್ ರಾಯ್ ಅವರು ವೈಯಕ್ತಿಕ ಕಾರಣ ನೀಡಿ ಪ್ರತಿ ಸೀಸನ್ ಹಿಂದೆ ಸರಿಯುತ್ತಿದ್ದ ಕಾರಣ ಅವರ ಹೆಸರನ್ನು ತೆಗೆದು ಹಾಕಲಾಗಿದೆ.
ಭಾರತದ ದೇಸಿ ತಳಿ ರಾಸುಗಳ
ಬಗ್ಗೆ ಗೊತ್ತೆ
ಇದು ಮಹಾರಾಷ್ಟ್ರದ ಲಾಲ್ ಕಠಾರಿ