ಭಾರತದ ಟಾಪ್ 10 ಐಪಿಎಸ್ ಅಧಿಕಾರಿಗಳು ಇವರು

By Raghavendra M Y
Apr 25, 2024

Hindustan Times
Kannada

ಆಂಧ್ರ ಪ್ರದೇಶದ ಕರ್ನೂಲ್ ಎಸ್ಪಿ ಅಕೆ ರವಿಕೃಷ್ಣ ಅವರು ಕಪ್ಪತ್ರಾಳ ಗ್ರಾಮವನ್ನ ದತ್ತು ಪಡೆದುಕೊಂಡಿದ್ದಾರೆ. ಈ ಪ್ರದೇಶ ಸೇಡಿನ ಕೊಲೆ ಸರಣಿಗೆ ಹೆಸರುವಾಸಿಯಾಗಿತ್ತು

ಐಪಿಎಸ್ ಆರಿಫ್ ಖಾನ್ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಚೀಫ್ ಆಫ್ ಪೊಲೀಸ್ (ಎಐಸಿಪಿ) ಪ್ರಶಸ್ತಿಯನ್ನ ಸತತ 2 ಬಾರಿ ಪಡೆದ ಭಾರತದ ಏಕೈಕ ಐಪಿಎಸ್ ಅಧಿಕಾರಿ

ಆಸ್ರಾ ಗಾರ್ಗ್ ಅವರು ತಮಿಳುನಾಡಿನ ಕೇಡರ್‌ನ 2004 ಬ್ಯಾಚ್‌ನ ಐಪಿಎಸ್ ಅಧಿಕಾರಿ. ಚೆನ್ನೈ ನಾರ್ಥ ವಿಭಾಗದ ಕಾನೂನು, ಸುವ್ಯವಸ್ಥೆ ವಿಭಾಗದ ಎಸಿಪಿಯಾಗಿದ್ದಾರೆ

ಐಪಿಎಸ್ ಮಹೇಶ್ ಮುರಳೀಧರ್ ಭಾಗವತ್ ಅವರು ಮಾನವ ಕಳ್ಳ ಸಾಗಣೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2017ರ ಟ್ರಾಫಿಕಿಂಗ್ ಇನ್ ಪರ್ಸನ್ಸ್ (ಟಿಐಪಿ) ಪ್ರಶಸ್ತಿ ಪಡೆದಿದ್ದಾರೆ

ಮನೀಶ್ ಶಂಕರ್ ಶರ್ಮಾ ಅವರು ಖಡಕ್ ಐಪಿಎಸ್ ಅಧಿಕಾರಿ. ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಭಯೋತ್ಪಾದನೆ ನಿಗ್ರಹ ತಂತ್ರಗಳನ್ನು ರೂಪಿಸುವಲ್ಲಿ ಪರಿಣಿತರಿದ್ದಾರೆ

ಐಪಿಎಸ್ ಡಿ ರೂಪಾ ಅವರು ಕರ್ನಾಟದಲ್ಲಿ ಜೈಲು ವಿಭಾಗದ ಡಿಜಿಪಿಯಾಗಿದ್ದಾಗ ಜೈಲು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದರು

ಆರ್ ಶ್ರೀಲೇಖಾ ಅವರು 1987 ರಲ್ಲಿ ಕೇರಳದ ಮೊದಲ ಐಪಿಎಸ್ ಅಧಿಕಾರಿಯಾಗಿದ್ದಾರೆ

ಸಂಜುಕ್ತಾ ಪರಾಶರ್ ಅವರು ಅಸ್ಸಾಂ ಮೂಲದ ಐಪಿಎಸ್ ಅಧಿಕಾರಿ. ಇವರನ್ನು ಐರನ್ ಲೇಡಿ ಅಂತ ಕರೆಯಲಾಗುತ್ತೆ. ಅನೇಕ ಬೋಡೋ ಉಗ್ರರನ್ನು ಹೊಡೆದುರುಳಿಸಿದ್ದಾರೆ

ಬಿಹಾರದ ಶಿವದೀಪ್ ಲಾಂಡೆ ಅವರು ಖಡಕ್ ಐಪಿಎಸ್ ಅಧಿಕಾರಿ. ಪಾಟ್ನಾದಲ್ಲಿ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ

ಯುಪಿ ಕೇಡರ್‌ನ ಐಪಿಎಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ತಮ್ಮ ಸೇವೆಯಿಂದಲೇ ಜನಪ್ರಿಯರಾಗಿದ್ದಾರೆ. ಇವರನ್ನು ಲೇಡಿ ಸಿಂಗಂ ಎಂದು ಕರೆಯುತ್ತಾರೆ

ಜಿಐ ಟ್ಯಾಗ್ ಗೌರವ ಪಡೆದ ಭಾರತದ ಸ್ವೀಟ್ಸ್ ಇವು, ಕರ್ನಾಟಕದ್ದೂ ಇವೆ