Kitchen Tips: ಈ 7 ಟ್ರಿಕ್ಸ್ ಫಾಲೊ ಮಾಡಿದ್ರೆ ಫ್ರಿಜ್‌ನಿಂದ ಎಂದಿಗೂ ಕೆಟ್ಟ ವಾಸನೆ ಬರಲ್ಲ
By Reshma Sep 15, 2024
Hindustan Times Kannada
ಪ್ರತಿಯೊಬ್ಬರ ಮನೆಯಲ್ಲೂ ಫ್ರಿಜ್ ಇದ್ದೇ ಇರುತ್ತದೆ. ಆಹಾರ ಪದಾರ್ಥಗಳನ್ನು ಕೆಡದಂತೆ ರಕ್ಷಿಸುವ ಫ್ರಿಜ್ ಎಷ್ಟು ಕ್ಲೀನ್ ಮಾಡಿದ್ರೂ ಕೆಲವೇ ದಿನಗಳಲ್ಲಿ ವಾಸನೆ ಬರಲು ಶುರುವಾಗುತ್ತದೆ
ರೆಫ್ರಿಜರೇಟರ್‌ನ ವಾಸನೆ ಬಾರದಂತೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳಿವೆ ನಿಜ. ಆದರೆ ಇದು ದುಬಾರಿ ಎನ್ನಿಸುತ್ತದೆ
ಹಾಗಂತ ಫ್ರಿಜ್ ವಾಸನೆ ಹೋಗಲಾಡಿಸಲು ಅಷ್ಟೆಲ್ಲಾ ಸಾಹಸ ಮಾಡಬೇಕು ಅಂತೇನಿಲ್ಲ. ಮನೆಯಲ್ಲೇ ಈ ಕೆಲವು ಟ್ರಿಕ್ಸ್ ಅನುಸರಿಸಿದ್ರೆ ಸಾಕು, ವಾಸನೆ ಮಾಯವಾಗುತ್ತೆ
ಟೀ ಬ್ಯಾಗ್ ಸಹಾಯದಿಂದ ಫ್ರಿಜ್ ವಾಸನೆ ಹೋಗಲಾಡಿಸಬಹುದು. ಟೀ ಬ್ಯಾಗ್ ಅನ್ನು ಫ್ರಿಜ್‌ನಲ್ಲಿ ಇಡುವುದರಿಂದ ಫ್ರಿಜ್ ಟೀ ಬ್ಯಾಗ್ ವಾಸನೆ ಹೀರಿಕೊಳ್ಳುತ್ತದೆ
ಕಾಫಿ ವಾಸನೆ ಕೂಡ ತುಂಬಾ ಪ್ರಬಲವಾಗಿದೆ. ನಿಮ್ಮ ಫ್ರಿಜ್ ವಾಸನೆ ಬರುತ್ತಿದ್ದರೆ ಒಂದು ಬೌಲ್‌ನಲ್ಲಿ 2 ಚಮಚ ಕಾಫಿ ಪುಡಿ ಹಾಕಿ ಇಡಿ
ನಿಂಬೆಹಣ್ಣನ್ನು 4 ತುಂಡುಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿ ಇರಿಸಿ. ಅದೇ ಬಟ್ಟಲಿನಲ್ಲಿ 2 ರಿಂದ 3 ಚಮಚ ಅಡುಗೆಸೋಡಾ ಸೇರಿಸಿ, ಫ್ರಿಜ್‌ನಲ್ಲಿಡಿ. ಇದರಿಂದ ಫ್ರಿಜ್ ವಾಸನೆ ಮುಕ್ತವಾಗಲಿದೆ
ಫ್ರಿಜ್‌ನಲ್ಲಿ ಉಳಿದ ಆಹಾರವನ್ನು ಸಂಗ್ರಹಿಸುತ್ತಿದ್ದರೆ ಯಾವಾಗಲೂ ಗಾಳಿಯಾಡದ ಕಂಟೇನರ್‌ನಲ್ಲಿ ಇಡಿ. ಯಾಕೆಂದರೆ ಆಹಾರದ ಕಟು ವಾಸನೆಯು ರೆಫ್ರಿಜರೇಟರ್ ದುರ್ವಾಸನೆ ಬೀರಲು ಪ್ರಾರಂಭಿಸುತ್ತದೆ
ಫ್ರಿಜ್‌ನಲ್ಲಿ ಹಲವು ವಸ್ತುಗಳನ್ನು ಇಡುವ ಕಾರಣ ಅದರಲ್ಲಿ ಕೊಳೆಯುವ ವಸ್ತುಗಳ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಫ್ರಿಜ್‌ನಲ್ಲಿ ಹಣ್ಣು, ತರಕಾರಿ ಕೊಳೆಯದಂತೆ ನೋಡಿಕೊಳ್ಳಿ
ವಾರದಲ್ಲಿ ಎರಡು ಅಥವಾ ಮೂರು ಬಾರಿ ಒಣ ಹಾಗೂ ಒದ್ದೆ ಬಟ್ಟೆಯಿಂದ ಫ್ರಿಜ್ ಸ್ವಚ್ಛ ಮಾಡಿ. ಫ್ರಿಜ್ ಸ್ವಚ್ಛ ಮಾಡಲು ಡಿಟರ್ಜೆಂಟ್ ಕೂಡ ಬಳಸಬಹುದು
ಫ್ರಿಜ್ ಹೆಚ್ಚಿನ ತಾಪಮಾನದಲ್ಲಿ ಇರುವುದು ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತದೆ. ಹಾಗಾಗಿ ಆಗ ಟೆಂಪರೇಚರ್ ಬದಲಿಸಿ
10 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ 15 ಸ್ಮಾರ್ಟ್‌ಫೋನ್‌ಗಳಿವು