ಚಹಾ ಜರಡಿ ಕೊಳಕಾಗಿದ್ಯಾ: ಸ್ವಚ್ಛಗೊಳಿಸುವುದು ತುಂಬಾನೇ ಸಿಂಪಲ್

freepik

By Priyanka Gowda
Oct 01, 2024

Hindustan Times
Kannada

ಚಹಾ ಸೋಸುವ ಸಾಧನದಲ್ಲಿ ಶೇಷ ಸಂಗ್ರಹವಾಗುವುದು ಸಾಮಾನ್ಯ. ಇದರಿಂದ ಚಹಾದ ರುಚಿ ಬದಲಾಗುವುದು ಮಾತ್ರವಲ್ಲದೆ ಸ್ಟ್ರೈನರ್ ಬೇಗನೇ ಹಾಳಾಗುತ್ತದೆ. ಹೀಗಾಗಿ ಅದನ್ನು ಶುಚಿಗೊಳಿಸುವುದು ಬಹಳ ಮುಖ್ಯ.

freepik

ಟೀ ಸ್ಟ್ರೈನರ್ ಅನ್ನು ಸ್ವಚ್ಛಗೊಳಿಸುವುದು ತುಂಬಾನೇ ಸಿಂಪಲ್. ಸ್ಟ್ರೈನರ್ ಶುಚಿಗೊಳಿಸುವ ಐದು ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ.

freepik

ಅಡುಗೆ ಸೋಡಾ ಮತ್ತು ವಿನೆಗರ್: ಒಂದು ಬೌಲ್‍ನಲ್ಲಿ ಒಂದೇ ಅಳತೆಯ ಅಡುಗೆ ಸೋಡಾ ಮತ್ತು ವಿನೆಗರ್‌ ಅನ್ನು ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಇದರಲ್ಲಿ ಸ್ಟ್ರೈನರ್ ಅನ್ನು ಇಟ್ಟು ಒಂದು ಗಂಟೆ ನೆನೆಯಲು ಬಿಡಿ. ನಂತರ ತೊಳೆಯಿರಿ.

freepik

ತಕ್ಷಣ ತೊಳೆಯಿರಿ: ಚಹಾ ಸೋಸಿದ ಕೂಡಲೇ ಬಿಸಿ ನೀರಿನ ಸಹಾಯದಿಂದ ಸ್ಟ್ರೈನರ್ ಅನ್ನು ತಕ್ಷಣವೇ ಚೆನ್ನಾಗಿ ತೊಳೆಯಿರಿ.

freepik

ಬಿಸಿ ನೀರು: ಚಹಾ ಸೋಸುವ ಸಾಧನಕ್ಕೆ ಬಿಸಿ ನೀರನ್ನು ಸುರಿದು, ಬ್ರಷ್‍ನಿಂದ ಚೆನ್ನಾಗಿ ಉಜ್ಜಿ ತೊಳೆದರೆ, ಸ್ಟ್ರೈನರ್ ಪಳಪಳ ಹೊಳೆಯುತ್ತದೆ.

freepik

ನಿಂಬೆ ರಸ: ಅರ್ಧ ನಿಂಬೆಹಣ್ಣಿನಿಂದ ಚಹಾ ಸೋಸುವ ಸಾಧನವನ್ನು ಚೆನ್ನಾಗಿ ಉಜ್ಜಿರಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು, ನಂತರ ನೀರಿನಿಂದ ತೊಳೆಯಬೇಕು.

freepik

ಪಾತ್ರೆ ತೊಳೆಯುವ ಸಾಬೂನ್: ಬೆಚ್ಚಗಿನ ನೀರಿಗೆ ಪಾತ್ರೆ ತೊಳೆಯುವ ಸಾಬೂನ್ ಅನ್ನು ಮಿಶ್ರಣ ಮಾಡಿ. ಚಹಾ ಸೋಸುವ ಸಾಧನವನ್ನು ಇದರಲ್ಲಿ ನೆನೆಸಿಡಿ. ನಂತರ ಹಲ್ಲುಜ್ಜುವ ಬ್ರಷ್ ಸಹಾಯದಿಂದ ತಿಕ್ಕಿ ತೊಳೆಯಿರಿ.

freepik

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?