ನಾವ್‌ವೆಜ್ ಅಡುಗೆ ತಯಾರಿಸುವ ಮೊದಲು ಮಾಂಸ ಸ್ವಚ್ಛಗೊಳಿಸುವುದು ಹೇಗೆ; ಇಲ್ಲಿದೆ ಸುಲಭ ವಿಧಾನ 

By Reshma
Apr 01, 2024

Hindustan Times
Kannada

ನಾನ್‌ವೆಜ್‌ ಪ್ರಿಯರು ಪ್ರತಿದಿನ ನಾನ್‌ವೆಜ್‌ ಕೊಟ್ಟರು ತಿನ್ನಲು ಸಿದ್ಧರಿರುತ್ತಾರೆ. ಅದರಲ್ಲೂ ಭಾನುವಾರದ ದಿನಗಳಲ್ಲಂತೂ ಮಾಂಸಾಹಾರ ಬೇಕೇ ಬೇಕು. ಭಾನುವಾರ ಸಾಮಾನ್ಯವಾಗಿ ಮನೆಯಲ್ಲೇ ನಾನ್‌ವೆಜ್‌ ಮಾಡುತ್ತಾರೆ. 

ಮನೆಯಲ್ಲಿ ನಾನ್‌ವೆಜ್‌ ಮಾಡುವುದು ಇಷ್ಟವಾದ್ರೂ ಇದನ್ನು ಸ್ವಚ್ಛ ಮಾಡುವುದೇ ದೊಡ್ಡ ಕೆಲಸವಾಗುತ್ತದೆ. ಕೋಳಿ, ಕುರಿ, ಮೀನು ಯಾವುದೇ ಆಗಿರಲಿ ಸ್ವಚ್ಛ ಮಾಡುವುದು ಸ್ವಲ್ಪ ಕಷ್ಟವೇ ಸರಿ. 

ಕೋಳಿ ಅಥವಾ ಇತರ ಮಾಂಸವನ್ನು ಸರಿಯಾಗಿ ಸ್ವಚ್ಛ ಮಾಡದೇ ಇದ್ದರೆ ಕೊಳಕು ಹಾಗೇ ಉಳಿದು ಸೋಂಕು ಉಂಟಾಗಲು ಕಾರಣವಾಗಬಹುದು. 

ಮಾಂಸವನ್ನು ಸ್ವಚ್ಛಗೊಳಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಸೋಂಕು ಕೈಗಳ ಮೂಲಕವೂ ಹರಡುತ್ತದೆ. ಹಾಗಾಗಿ ಕೈಗಳನ್ನು ಸೋಪು ಅಥವಾ ಹ್ಯಾಂಡ್‌ವಾಶ್‌ನಿಂದ ನೀಟಾಗಿ ತೊಳೆದುಕೊಳ್ಳಿ. 

ನಂತರ ನೀರು ಬಿಸಿ ಮಾಡಿ, ಆ ನೀರಿಗೆ ಉಪ್ಪು ಸೇರಿಸಿ. ನೀರಿನಲ್ಲಿ ಮಾಂಸವನ್ನು ಕೆಲ ಹೊತ್ತಿನವರೆಗೆ ನೆನೆಸಿಡಿ. 

ಬಿಸಿನೀರಿನಿಂದ ತಣ್ಣೀರಿಗೆ ಹಾಕಿ, ನಂತರ ಕೈಗಳಿಂದ ಚೆನ್ನಾಗಿ ಮಾಂಸವನ್ನು ಸ್ವಚ್ಛ ಮಾಡಿ. 

ನೀರಿಗೆ ನಿಂಬೆರಸ ಸೇರಿಸಿ. ನಿಂಬೆರಸವು ಮಾಂಸದಿಂದ ರಕ್ತ ಹಾಗೂ ಕೂದಲಿನ ನಿವಾರಣೆಗೆ ಸಹಕರಿಸುತ್ತದೆ. ಕೇವಲ ಐದು ನಿಮಿಷಗಳ ಕಾಲ ನಿಂಬೆರಸದಲ್ಲಿ ಮಾಂಸವನ್ನು ನೆನೆಸಿಡಿ. 

ಮಾಂಸವನ್ನು ಸ್ವಚ್ಛ ಮಾಡಲು ವಿನೇಗರ್‌ ಸಹ ಬಳಸಬಹುದು. ಇದು ಮಾಂಸದಲ್ಲಿರುವ ಬ್ಯಾಕ್ಟೀರಿಯಾವನ್ನು ಸ್ವಚ್ಛ ಮಾಡಲು ಸಹಾಯ ಮಾಡುತ್ತದೆ. 

ಮಾಂಸವನ್ನು ಸ್ವಚ್ಛ ಮಾಡಲು ಅರಿಸಿನಿದ ನೀರನ್ನು ಕೂಡ ಬಳಸಬಹುದು. ಇದು ಮಾಂಸದಲ್ಲಿರುವ ರಕ್ತದ ಅಂಶವನ್ನು ಚೆನ್ನಾಗಿ ಸ್ವಚ್ಛ ಮಾಡುತ್ತದೆ. 

ಮಾಂಸವನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡಲು ಫ್ರಿಜ್‌ನಲ್ಲಿ ಇಡಬಹುದು. 

ಬಾಯಿಯ ದುರ್ವಾಸನೆ ನಿಲ್ಲಲು ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ