ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?

By Jayaraj
May 20, 2024

Hindustan Times
Kannada

ಐಪಿಎಲ್‌ 2024ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್‌ ಮತ್ತು ಎಸ್‌ಆರ್‌ಎಚ್‌ ತಂಡಗಳು ಎದುರಾಗುತ್ತಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ನೋಡೋಣ

ಐಪಿಎಲ್‌ನಲ್ಲಿ ಈ ಎರಡು ತಂಡಗಳು ಒಟ್ಟು 26 ಬಾರಿ ಪರಸ್ಪರ ಎದುರಾಗಿವೆ.

ಇದರಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು 17 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಅತ್ತ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 9 ಬಾರಿ ಗೆದ್ದಿದೆ.

ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿಯೂ ಕೆಕೆಆರ್ 3-2 ಅಂತರದಿಂದ ಮುನ್ನಡೆ ಸಾಧಿಸಿದೆ. 

ಪ್ರಸಕ್ತ ಆವೃತ್ತಿಯಲ್ಲಿ ತಂಡಗಳು ಒಂದು ಬಾರಿ ಮಾತ್ರ ಎದುರಾಗಿದ್ದು, ಅದರಲ್ಲೂ ಕೆಕೆಆರ್‌ ಗೆದ್ದು ಬೀಗಿದೆ.

ಅಹಮದಾಬಾದ್‌ನಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಪರಸ್ಪರ ಕಾದಾಡಲಿವೆ.

ಆಂಡ್ರೆ ರಸೆಲ್ ಪತ್ನಿ ಬ್ಯೂಟಿ ಮಾತ್ರವಲ್ಲ ಫಿಟ್ ಕೂಡಾ