ಸೇಡಿನ ಸಮರಕ್ಕೆ ಬೆಂಗಳೂರು ಸಜ್ಜು; ಕೆಕೆಆರ್ vs ಆರ್ಸಿಬಿ ಹೆಡ್ ಟು ಹೆಡ್ ದಾಖಲೆ ಇಲ್ಲಿದೆ
By Prasanna Kumar P N Apr 20, 2024
Hindustan Times Kannada
17ನೇ ಆವೃತ್ತಿಯ ಐಪಿಎಲ್ನ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಇದೀಗ ಆರ್ಸಿಬಿ, ಕೆಕೆಆರ್ ವಿರುದ್ಧ ಸೋಲಿನ ಸೇಡಿಗೆ ಸಜ್ಜಾಗಿದ್ದು, ಏಪ್ರಿಲ್ 21ರ ಮಧ್ಯಾಹ್ನ 3.30ಕ್ಕೆ ಪಂದ್ಯ ಜರುಗಲಿದೆ.
ಇದೀಗ ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಉಭಯ ತಂಡಗಳು ಒಟ್ಟು 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಕೆಕೆಆರ್ ಹೆಚ್ಚು ಪಂದ್ಯ ಗೆದ್ದಿದೆ. ಆರ್ಸಿಬಿ 14, ಕೋಲ್ಕತ್ತಾ 19ರಲ್ಲಿ ಜಯಿಸಿದೆ.
ಪ್ರಸಕ್ತ ಆವೃತ್ತಿಯಲ್ಲಿ ಮಾರ್ಚ್ 29ರಂದು ಎರಡೂ ತಂಡಗಳು ಮುಖಾಮುಖಿಯಾದ ತಮ್ಮ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೆಕೆಆರ್ ಭರ್ಜರಿ ಜಯ ಸಾಧಿಸಿತ್ತು. ಇದೀಗ ಬೆಂಗಳೂರು ಸೇಡಿಗೆ ಸಜ್ಜಾಗಿದೆ.