1 ತಿಂಗಳು ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಇಷ್ಟು ಪ್ರಯೋಜನ
By Jayaraj Sep 18, 2024
Hindustan Times Kannada
ಸತತ ಒಂದು ತಿಂಗಳ ಕಾಲ ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳಿವು.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ ಕಾಂಪ್ಲೆಕ್ಸ್, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಆಂಟಿಆಕ್ಸಿಡೆಂಟ್‌ಗಳು ತುಂಬಿವೆ. ಹೀಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದು.
ತಜ್ಞರ ಪ್ರಕಾರ, ನೆಲ್ಲಿಕಾಯಿ ಜ್ಯೂಸ್‌ನಲ್ಲಿ ಆಹಾರದ ಫೈಬರ್ ಹೇರಳವಾಗಿರುತ್ತದೆ. ಇದರ ಸೇವನೆಯಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.
ಸತತ 30 ದಿನಗಳ ಕಾಲ ಖಾಲಿ ಹೊಟ್ಟೆಗೆ ಸೇವಿಸಿದರೆ, ನಿಮ್ಮ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ನಾರಿನಂಶವಿರುವ ನೆಲ್ಲಿಕಾಯಿ ಸೇವನೆ ಜೀರ್ಣಕ್ರಿಯೆಗೆ ಒಳ್ಳೆಯದು. ನಿತ್ಯದ ಸೇವನೆಯು ಮಲಬದ್ಧತೆ, ಅಜೀರ್ಣ, ಹೊಟ್ಟೆಯ ಗ್ಯಾಸ್ ಇತ್ಯಾದಿ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿದರೆ, ಚರ್ಮದ ಆರೋಗ್ಯ ಸುಧಾರಿಸುತ್ತದೆ.
ಇದರಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಎ ಇದೆ. ಇದು ಕಣ್ಣಿಗೆ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಒದಗಿಸಲು ಮತ್ತು ದೃಷ್ಟಿ ಸುಧಾರಿಸಲು ಪ್ರಯೋಜನಕಾರಿ.
ಪ್ರತಿದಿನ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.
ಇದು ರಕ್ತದೊತ್ತಡ ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.