ನಿತ್ಯ ಖುಷಿಯಾಗಿರಬೇಕೆಂದರೆ ಇಷ್ಟು ಮಾಡಿ ಸಾಕು

By Jayaraj
Nov 28, 2024

Hindustan Times
Kannada

ಅನಗತ್ಯ ಯೋಚನೆಗಳನ್ನು ತಲೆಯಿಂದ ತೆಗೆದು ಹಾಕಿ. ಯೋಚನೆ ಮಾಡುವಾಗ ಮಾತ್ರ ಗಂಭೀರವಾಗಿ ಯೋಚಿಸಿ.

ಇಷ್ಟವಿಲ್ಲದ ಕೆಲಸವನ್ನು ಮಾಡಬೇಡಿ. ನಿಮಗೆ ಖುಷಿ ಕೊಡುವ, ನೀವು ಪ್ರೀತಿಸುವ ಕೆಲಸ ಮಾಡಿ. ಇಚ್ಛೆ ಇಲ್ಲದಿದ್ದರೆ ಯಾರೇ ಆದರೂ ಒಲ್ಲೆ ಎನ್ನಿ.

ಧನಾತ್ಮಕವಾಗಿರಿ. ನಕಾರಾತ್ಮಕ ಆಲೋಚನೆಯಿಂದ ದೂರವಾಗಿ. ಇದು ಮನಸ್ಸಿಗೆ ಶಾಂತಿ ಕೊಡುತ್ತದೆ.

ನಿಮಗೆ ನೀವು ಉತ್ತಮ ವ್ಯಕ್ತಿಗಳಾಗಿ. ನಿಮಗೆ ನೀವು ಸತ್ಯವಂತರಾಗಿ. ಬೇರೆಯವರ ಮನವೊಲಿಸಲು ಒಳ್ಳೆಯವರಾಗುವ ಪ್ರಯತ್ನ ಬೇಡ.

ಯೋಗ, ಧ್ಯಾನ, ಪ್ರಾಣಾಯಾಮ ಮಾನಸಿಕ ನೆಮ್ಮದಿಗೆ ಬಹಳ ಸಹಕಾರಿ. ಇದು ಮಾನಸಿಕ ಸಮತೋಲನ ಕಾಪಾಡುತ್ತದೆ.

ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಿ. ಬಂದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ. ಎದೆಗುಂದಬೇಡಿ, ಕೈಚೆಲ್ಲಿ ಕೂರಬೇಡಿ.

ಆಪ್ತರೊಂದಿಗೆ, ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಮನಸ್ಸು ಬಿಚ್ಚಿ ಮಾತನಾಡಿ. ನಿಮ್ಮ ಸಂತಸವನ್ನು ನಾಲ್ವರೊಂದಿಗೆ ಹಂಚಿಕೊಳ್ಳಿ.

ಮುಖದಲ್ಲಿ ಮಂದಹಾಸ ಇರಲಿ. ಬೇಜಾರಾದಾಗ, ನೋವಾದಾಗ ನಿಮ್ಮವರೊಂದಿಗೆ ಹಂಚಿಕೊಳ್ಳಿ. ಅಳಬೇಕೆಂದಾಗ ಮನಸ್ಸು ಬಿಚ್ಚಿ ಅತ್ತುಬಿಡಿ.

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?