ತನ್ನದೇ ಮಕ್ಕಳನ್ನು ತಿನ್ನುವ 5 ಪ್ರಾಣಿಗಳಿವು
By Jayaraj
Sep 22, 2024
Hindustan Times
Kannada
ಕೆಲವು ಜಾತಿಯ ಪ್ರಾಣಿಗಳು ತನ್ನದೇ ಮರಿಗಳನ್ನು ತಿನ್ನುತ್ತವೆ. ಅದು ತನ್ನ ಉಳಿವಿಗಾಗಿ ಅಥವಾ ಶಕ್ತಿಗಾಗಿ ಮರಿಗಳನ್ನು ಸೇವಿಸುತ್ತವೆ.
ಕಠಿಣ ಪರಿಸರಗಳು ವ್ವಸ್ಥೆಯು ಕೆಲವು ಪ್ರಾಣಿಗಳನ್ನು ತಮ್ಮ ಮರಿಗಳನ್ನೇ ತಿನ್ನುವಂತೆ ಪ್ರೇರೇಪಿಸುತ್ತದೆ.
ಒತ್ತಡ ಅಥವಾ ಕಿಕ್ಕಿರಿದ ಜೀವನ ಪರಿಸ್ಥಿತಿಗಳ ಸಮಯದಲ್ಲಿಯೂ ಕೆಲವು ಪ್ರಾಣಿಗಳು ಜೀವಂತ ಮರಿಗಳನ್ನು ತಿನ್ನಲು ನೋಡುತ್ತವೆ.
ಪ್ರತಿಕೂಲವಾದ ಪರಿಸರ ಅಥವಾ ಪೌಷ್ಟಿಕಾಂಶದ ಪರಿಸ್ಥಿತಿಗಳಿಂದಲೂ ಹೀಗಾಗಬಹುದು. ತನ್ನ ಸಂತತಿಯನ್ನು ತಿನ್ನುವ ಐದು ಪ್ರಾಣಿಗಳು ಹೀಗಿವೆ
ಚಿಂಪಾಂಜಿಗಳು ಕೆಲವೊಮ್ಮೆ ತಮ್ಮ ಸಂತಾನವೃದ್ಧಿ ಸಾಧ್ಯತೆಯನ್ನು ಹೆಚ್ಚಿಸಲು ನವಜಾತ ಮರಿಗಳನ್ನು ತಿನ್ನುತ್ತವೆ.
ಹ್ಯಾಮ್ಸ್ಟರ್ ಪ್ರಾಣಿಯು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾಗ ತನ್ನ ನವಜಾತ ಶಿಶುಗಳನ್ನು ತಿನ್ನಬಹುದು.
ಗಂಡು ಸಿಂಹಗಳು ಸಿಂಹಿಣಿಯೊಂದಿಗೆ ಬೇಗನೆ ಸಂತಾನೋತ್ಪತ್ತಿಯಲ್ಲಿ ಭಾಗಿಯಾಗಲು, ಮರಿಗಳನ್ನು ಕೊಂದು ಕೆಲವೊಮ್ಮೆ ತಿನ್ನುತ್ತವೆ.
ಹವಾಮಾನ ಬದಲಾವಣೆಯಿಂದಾಗುವ ಆಹಾರದ ಕೊರತೆಯಿಂದಾಗಿ ಹಿಮಕರಡಿಗಳು ಕೂಡಾ ತನ್ನ ಮರಿಗಳನ್ನು ತಿನ್ನುತ್ತವೆ.
ಕ್ಯಾನ್ ಟೋಡ್ ಗೊದಮೊಟ್ಟೆ (ಉಭಯಚರ) ತನ್ನ ಸಣ್ಣ ಮರಿಗಳನ್ನು ಸೇವಿಸುತ್ತವೆ.
ಮಾರ್ಟಿನ್ ಪದದ ರಿಯಲ್ ಅರ್ಥವಿದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ