ಹೆಚ್ಚು ಉದ್ಯೋಗಾವಕಾಶಗಳಿರುವ ದೇಶಗಳಿವು

By Jayaraj
Sep 22, 2024

Hindustan Times
Kannada

ಸೂಕ್ತವಾದ ಉದ್ಯೋಗ ಸಿಗಬೇಕೆಂದರೆ ಒಂದಷ್ಟು ಹುಡುಕಾಟ ಮಾಡಬೇಕು. ಜನಸಂಖ್ಯೆ ಜಾಸ್ತಿ ಇರುವ ಭಾರತದಲ್ಲಿ ಎಷ್ಟೇ ಉದ್ಯೋಗಗಳಿದ್ದರು ಸಾಲುವುದಿಲ್ಲ.

ಭಾರತೀಯರು ಉದ್ಯೋಗ ಅರಸಿ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸುತ್ತಾರೆ. ಗುಣಮಟ್ಟದ ಜೀವನ ಮತ್ತು ಹೆಚ್ಚು ಸಂಬಳ ಪಡೆಯಬಹುದಾದ ದೇಶಗಳಿವು.

ಯುನೈಟೆಡ್ ಕಿಂಗ್‌ಡಮ್: ಅತಿ ಹೆಚ್ಚು ಸಂಭಾವನೆ ಕೊಡುವ ದೇಶಗಳಲ್ಲಿ ಒಂದು. ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚು. ಇಂಗ್ಲೆಂಡ್‌ ಭಾರತೀಯರ ಫೇವರೆಟ್.

ಜರ್ಮನಿ: ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿರುವ ಜರ್ಮನಿಯಲ್ಲೂ ಉದ್ಯೋಗಾವಕಾಶ ಹೆಚ್ಚಿದೆ.

ಯುಎಸ್‌ಎ: ವಿಶ್ವದ ದೊಡ್ಡಣನ ನೆಲದಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದಾರೆ. ಇಲ್ಲಿ ಉದ್ಯೋಗಾವಕಾಶ ಅಧಿಕ

ಚೀನಾ: ದೊಡ್ಡ ದೇಶವು ವೇಗದ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅತ್ಯಧಿಕ ಉದ್ಯೋಗಾವಕಾಶ ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ಟರ್ಕಿ: ಶಿಕ್ಷಣದ ಜೊತೆಗೆ ಅಪಾರ ಉದ್ಯೋಗಾವಕಾಶಗಳಿಗೆ ಹೆಸರುವಾಸಿಯಾದ ದೇಶ.

ಆಸ್ಟ್ರೇಲಿಯಾ: ಉತ್ತಮ ಜೀವನಮಟ್ಟದ ಜೊತೆಗೆ, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಭಾರತೀಯರಿಗೆ ಉನ್ನತ ಆಯ್ಕೆಗಳಲ್ಲಿ ಒಂದಾಗಿದೆ.

ಯುವತಿಯರಿಗೊಂದೇ ಅಲ್ಲ ನವರಾತ್ರಿಯ ಸಾಂಪ್ರದಾಯಿಕ ಲುಕ್! ಯುವಕರೇ, ನಿಮ್ಮ ಬಟ್ಟೆ ಹೀಗಿರಲಿ