ಹೈಹೀಲ್ಸ್ ಮೊದಲು ರೂಪಿಸಿದ್ದೇ ಹುಡುಗರಿಗಾಗಿ; ಈಗ ಇದು ಮಹಿಳೆಯರ ಫ್ಯಾಷನ್
By Jayaraj Nov 13, 2024
Hindustan Times Kannada
ಮಹಿಳೆಯರು ಸಾಮಾನ್ಯವಾಗಿ ಎತ್ತರ ಮತ್ತು ಸುಂದರವಾಗಿ ಕಾಣಲು ಹೈ ಹೀಲ್ಸ್ ಧರಿಸುತ್ತಾರೆ. ಮಹಿಳೆಯರ ಹೈ ಹೀಲ್ಸ್ ಸಾಮಾನ್ಯ ಫ್ಯಾಷನ್ ಆಗಿದೆ.
ಹೈ ಹೀಲ್ಸ್ ಎಂದಾಗ ಮೊದಲು ಯೋಚಿಸುವುದು ಮಹಿಳೆಯರ ಬಗ್ಗೆ. ಆದರೆ ಹಿಂದೆ ಇದನ್ನು ಹುಡುಗಿಯರ ಬದಲು ಹುಡುಗರಿಗಾಗಿ ಪ್ರಾರಂಭಿಸಲಾಗಿದೆ.
ಹೈ ಹೀಲ್ ಪಾದರಕ್ಷೆಗಳ ಇತಿಹಾಸ ತಿಳಿಯೋಣ.
ಹತ್ತನೇ ಶತಮಾನದಲ್ಲಿ ಪರ್ಷಿಯನ್ ಸಾಮ್ರಾಜ್ಯದಲ್ಲಿ ಹೈ ಹೀಲ್ಸ್ ಕಂಡುಹಿಡಿಯಲಾಯಿತು. ಕುದುರೆ ಮೇಲೆ ಸವಾರಿ ಮಾಡುವ ಮೊದಲ ಸೈನಿಕರು ಹೀಲ್ಸ್ ಧರಿಸುಸುತ್ತಿದ್ದರು.
ಯುದ್ಧದ ಸಮಯದಲ್ಲಿ ಕುದುರೆ ಸವಾರಿ ಮಾಡುವಾಗ ಸೈನಿಕರು ತಮ್ಮ ಪಾದಗಳನ್ನು ಸ್ಟಿರಪ್‌ಗಳಲ್ಲಿ ಸಿಲುಕಿಸಲು ಎತ್ತರದ ಹಿಮ್ಮಡಿ ಇರುವ ಬೂಟು ಧರಿಸುತ್ತಿದ್ದರು. ಅದು ಒಂದು ಉನ್ನತ ಸ್ಥಾನಮಾನದ ಪ್ರತೀಕವಾಗಿತ್ತು.
15ನೇ ಶತಮಾನದಲ್ಲಿ ಹೀಲ್ಸ್ ಯುರೋಪ್ ತಲುಪಿತು. ಶ್ರೀಮಂತ ಜನರು ತಮ್ಮ ಸ್ಥಾನಮಾನ ತೋರಿಸಲು ಬಳಸುತ್ತಿದ್ದರು.
ಹೈ ಹೀಲ್ಸ್ ಹಾಗೂ ಅದಕ್ಕೆ ತಕ್ಕನಾದ ಬಟ್ಟೆಗಳನ್ನು ಧರಿಸಿ, ತಾನು ಕಾರ್ಮಿಕ ವರ್ಗದಾತ ಅಲ್ಲ, ಯಾವುದೇ ಶ್ರಮದ ಕೆಲಸ ಮಾಡಬೇಕಾಗಿಲ್ಲ ಎಂದು ತೋರಿಸಲು ಬಳಸುತ್ತಿದ್ದರು.
ಮಹಿಳೆಯರಲ್ಲಿ ಹೀಲ್ಸ್ ಪ್ರವೃತ್ತಿ 16ನೇ ಶತಮಾನದಲ್ಲಿ ಆರಂಭವಾಯಿತು. ಪುರುಷರ ಹಿಮ್ಮಡಿಗಿಂತ ಮಹಿಳೆಯರ ಹಿಮ್ಮಡಿ ತೆಳ್ಳಗಿದ್ದ ಕಾರಣ ಮಹಿಳೆಯರ ಕಾಲಿಗೆ ಅದು ಒಪ್ಪಿಗೆಯಾಯ್ತು.
ಹೈಹೀಲ್ಸ್ ಧರಿಸುವುದರಿಂದ ಮಹಿಳೆಯರ ದೇಹದ ಆಕಾರವು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಎಂದು ನಂಬಲಾಗಿತ್ತು. ಆ ಸಮಯದಿಂದ ಹೈ ಹೀಲ್ಸ್ ಮಹಿಳೆಯರ ಫ್ಯಾಷನ್‌ನ ಪ್ರಮುಖ ಭಾಗವಾಯಿತು.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು