ಜಿಮ್‌ಗೆ ಹೋಗದೆ ದೇಹವನ್ನು ಫಿಟ್ ಆಗಿಡುವುದು ಹೇಗೆ? 

By Jayaraj
Sep 22, 2024

Hindustan Times
Kannada

ನಿತ್ಯ ಜಿಮ್‌ಗೆ ಹೋಗದೆಯೂ ಫಿಟ್‌ ಆಗಿರಲು ಸಾಧ್ಯ. ಮನೆಯಲ್ಲೇ ಆಹಾರಕ್ರಮ ಹಾಗೂ ಸರಿಯಾದ ಜೀವನಶೈಲಿ ಅನುಸರಿಸುವ ಮೂಲಕ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಬಹುದು?

ಊಟ ಮಾಡುವಾಗ ಸರಿಯಾದ ಸಮಯ ಹಾಗೂ ಕ್ರಮದಲ್ಲಿ ಮಾಡಿ. ಸಂಪೂರ್ಣವಾಗಿ ತಿಂದು ಮುಗಿಸಿ. ದೇಹಕ್ಕೆ ಬೇಕಾದ ಅಗತ್ಯ ಪ್ರೊಟೀನ್‌, ಕ್ಯಾಲರಿಗಳು ಬರುವಂತೆ ಎಚ್ಚರ ವಹಿಸಿ.

ಸಕ್ಕರೆ ಸೇವನೆ ಆದಷ್ಟು ತಪ್ಪಿಸಿ. ದೇಹಕ್ಕೆ ಬೇಕಾದ ಸಿಹಿಯು ಹಣ್ಣು ಹಾಗೂ ತರಕಾರಿಗಳ ಸೇವನೆಯಿಂದ ಬರಲಿ. 

ಎಣ್ಣೆಯಲ್ಲಿ ಕರಿದ ಆಹಾರ ತ್ಯಜಿಸುವುದು ಉತ್ತಮ. ಬೆಳಗ್ಗೆ ಹಣ್ಣು-ತರಕಾರಿಗಳು, ಪ್ರೋಟೀನ್ ಭರಿತ ಆಹಾರ ಸೇವಿಸಿ.

ಬೆಳಗ್ಗೆ ಏಳಲು ಹಾಗೂ ರಾತ್ರಿ ಮಲಗಲು ಒಂದೇ ಸಮಯ ಅನುಸರಿಸಿ. ದೇಹಕ್ಕೆ ಅಗತ್ಯ ಪ್ರಮಾಣದ ನಿದ್ರೆ ಸಿಗಲಿ.

ಪ್ರತಿದಿನ ನಡಿಗೆ, ಮೆಟ್ಟಿಲು ಹತ್ತಿ ಇಳಿಯುವುದು, ಆಟ ಆಡುವುದು, ವಿವಿಧ ಕೆಲಸಗಳನ್ನು ಮಾಡುವುದು ಮಾಡುತ್ತಾ ಇರಿ.

Enter text Here

ಪ್ರತಿನಿತ್ಯ ಕನಿಷ್ಠ 3 ಲೀಟರ್ ನೀರು ಕುಡಿಯಿರಿ. ಧ್ಯಾನ, ಸೂರ್ಯನಮಸ್ಕಾರ, ಯೋಗದ ಮೂಲಕ ದೇಹವನ್ನು ಸದೃಢವಾಗಿಡಲು ಸಾಧ್ಯ.

ಪ್ರತಿದಿನ ಮನೆಯಲ್ಲೇ ಸರಳ ವ್ಯಾಯಾಮಗಳನ್ನು ಮಾಡಿ. ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ಕೊಡಿ. ಸರಳ ಭಂಗಿಗಳನ್ನು ಮಾಡಲು ಆರಂಭಿಸಿ, ನಿಧಾನವಾಗಿ ಕಠಿಣ ಭಂಗಿಗಳನ್ನು ಅಭ್ಯಾಸ ಮಾಡಿ.

ನಿತ್ಯ ಸೈಕ್ಲಿಂಗ್, ಹೊರಾಂಗಣ ಚಟುವಟಿಕೆಗಳು ದೇಹಕ್ಕೆ ಸಿಗಲಿ. ಸ್ವಿಮ್ಮಿಂಗ್‌, ಹೈಕಿಂಗ್‌, ಡಾನ್ಸ್‌, ಗಾರ್ಡನಿಂಗ್‌ ಮಾಡಿದರೂ ದೇಹಕ್ಕೆ ವ್ಯಾಯಾಮ ಸಿಗುತ್ತದೆ.

ಬೆಸ್ಟ್ ಎಸ್‌ಬಿ ಅಕೌಂಟ್‌ ಯಾವ ಬ್ಯಾಂಕ್‌ನದ್ದು