ಇಡೀ ಮೊಟ್ಟೆ ಅಥವಾ ಎಗ್‌ ವೈಟ್‌; ಆರೋಗ್ಯಕ್ಕೆ ಯಾವುದು ಬೆಸ್ಟ್?

By Jayaraj
Sep 15, 2024

Hindustan Times
Kannada

ಇದು ಹೆಚ್ಚು ಚರ್ಚೆಗೆ ಒಳಗಾಗುವ ವಿಷಯ. ಸಾಮಾನ್ಯವಾಗಿ ಅವರವರ ರುಚಿ ಅಥವಾ ಆಹಾರಕ್ರಮದ ಮೇಲೆ ಈ ಆಯ್ಕೆ ಇರುತ್ತದೆ. ಆದರೂ, ಇವೆರಡರ ಆರೋಗ್ಯ ವ್ಯತ್ಯಾಸಗಳ ಕುರಿತು ತಿಳಿಯೋದು ಉತ್ತಮ.

ರುಚಿ: ಸಂಪೂರ್ಣ ಮೊಟ್ಟೆ ಪರಿಮಳದೊಂದಿಗೆ ರುಚಿ ಹೆಚ್ಚು. ಆದರೆ ಎಗ್‌ವೈಟ್‌ ಸಾಧಾರಣ ರುಚಿ ಇರುತ್ತದೆ.

ಪೋಷಕಾಂಶ: ಇಡೀ ಮೊಟ್ಟೆಯು ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಭಾರಿ ಪೋಷಕಾಂಶಗಳನ್ನು ಒಳಗೊಂಡಿದೆ. ಆದರೆ ಎಗ್‌ವೈಟ್‌ನಲ್ಲಿ ಮುಖ್ಯವಾಗಿ ಪ್ರೋಟೀನ್ ಇರುತ್ತದೆ.

ಕ್ಯಾಲರಿಗಳು: ಇಡೀ ಮೊಟ್ಟೆಗೆ ಹೋಲಿಸಿದರೆ ಎಗ್‌ವೈಟ್‌ನಲ್ಲಿ ಕ್ಯಾಲರಿಗಳು ಕಡಿಮೆ. ಹೀಗಾಗಿ ಕ್ಯಾಲರಿ ಬೇಕಿಲ್ಲದವರಿಗೆ ಮೊಟ್ಟೆಯ ಬಿಳಿಭಾಗ ಉತ್ತಮ.

ಪ್ರೋಟೀನ್: ಮೊಟ್ಟೆಯ ಬಿಳಿಭಾಗವು ಯಾವುದೇ ಕೊಬ್ಬು ಇರದ ಪ್ರೋಟೀನ್ ಮೂಲವಾಗಿದೆ. ಹೆಚ್ಚು ಪ್ರೋಟೀನ್ ಬಯಸುವವರಿಗೆ ಎಗ್‌ವೈಟ್‌ ಸೂಕ್ತ.

ಕೊಬ್ಬು: ಇಡೀ ಮೊಟ್ಟೆ ಹಳದಿ ಭಾಗವು ಹೆಚ್ಚು ಕೊಬ್ಬನ್ನು ಹೊಂದಿರುತ್ತವೆ. ಆದರೆ ಮೊಟ್ಟೆಯ ಬಿಳಿಭಾಗವು ಕೊಬ್ಬು ಮುಕ್ತವಾಗಿರುತ್ತದೆ.

ಕೊಲೆಸ್ಟ್ರಾಲ್: ಸಂಪೂರ್ಣ ಮೊಟ್ಟೆಯ ಹಳದಿ ಭಾಗವು ಕೊಲೆಸ್ಟ್ರಾಲ್ ಹೊಂದಿರುತ್ತವೆ. ಹೀಗಾಗಿ ಕೊಲೆಸ್ಟ್ರಾಲ್ ಬಗ್ಗೆ ಕಾಳಜಿ ಇರುವವರಿಗೆ ಮೊಟ್ಟೆಯ ಬಿಳಿಭಾಗ ಮಾತ್ರ ಸೇವಿಸುತ್ತಾರೆ

All photos: Pexels

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ