ನಿಮ್ಮ ಮನೆ ದೊಡ್ಡದಾಗಿ ಕಾಣಿಸಬೇಕೆ? ಈ ಸಿಂಪಲ್ ಟಿಪ್ಸ್ ಫಾಲೊ ಮಾಡಿ
By Jayaraj
Sep 28, 2024
Hindustan Times
Kannada
ಮನೆ ನಿರ್ಮಿಸುವುದಕ್ಕಿಂತ ಅದನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಮುಖ್ಯ. ಕೆಲವೊಮ್ಮೆ ಸಣ್ಣ ಮನೆಯಾದರೂ, ಶಿಸ್ತುಬದ್ಧ ಜೋಡಣೆಯಿಂದ ಮನೆ ದೊಡ್ಡದಾಗಿ ಕಾಣುವಂತೆ ಮಾಡಬಹುದು.
ನಿಮ್ಮ ಮನೆ ನೋಡಲು ದೊಡ್ಡದಾಗಿ ಮತ್ತು ಹೆಚ್ಚು ಬೆಳಕಿನಿಂದ ಹೆಚ್ಚು ಪ್ರಕಾಶಮಾನವಾಗಿ ಕಾಣುವಂತೆ ಮಾಡಲು ಈ ಸಲಹೆಗಳನ್ನು ಪಾಲಿಸಿ.
ಮನೆ ಗೋಡೆ ಮತ್ತು ಸೀಲಿಂಗ್‌ನಲ್ಲಿ ಮಂದ ಅಥವಾ ಲೈಟ್ ಬಣ್ಣ ಇರುವಂತೆ ರೆಡಿ ಮಾಡಿಸಿ. ಅದು ಬೆಳಕಿನ ಪ್ರತಿಫಲನ ಸೃಷ್ಟಿಸುತ್ತವೆ.
ಕಿಟಕಿಗಳನ್ನು ನಿರಂತರ ಸ್ವಚ್ಛಗೊಳಿಸಿ. ಸೂರ್ಯನ ಕಿರಣ ಅಥವ ಹೊರಗಿನ ಬೆಳಕು ಮನೆಗೆ ಪ್ರವೇಶಿಸುವಂತೆ ಮಾಡಿ.
ಅನಗತ್ಯ ವಸ್ತುಗಳನ್ನ ಮನೆಯಿಂದ ದೂರವಿಡಿ. ಮನೆಗೆ ಏನು ಬೇಕೋ ಅದನ್ನು ಮಾತ್ರವೇ ಮನೆಯಲ್ಲಿಡಿ.
ಸಣ್ಣ ಸಣ್ಣ ಪೀಠೋಪಕರಣಗಳನ್ನು ಬಳಸಿ. ಅವು ಮನೆ ಸೀಲಿಂಗ್ ಮತ್ತು ನೆಲದ ನಡುವಿನ ಅಂತರ ಹೆಚ್ಚಿಸುತ್ತದೆ. ನೋಡಲು ಆ ಕೋಣೆ ಎತ್ತರವಾಗಿರುವಂತೆ ಬಿಂಬಿಸುತ್ತದೆ.
ಮಲ್ಟಿ ಫಂಕ್ಷನಿಂಗ್ ಪೀಠೋಪಕರಣ ಬಳಸಿ. ಬೆಡ್ ಕಮ್ ಸೋಫಾ, ಮಡಚಿಡುವ ಡೈನಿಂಗ್ ಟೇಬಲ್ ಹೀಗೆ ಮನೆ ಜಾಗ ಉಳಿಸುವ ಫರ್ನಿಚರ್ ಬಳಸಿ.
ನೆಲ ಪ್ರತಿಫಲಿಸುವಂತೆ ಇರಲಿ. ನೆಲಕ್ಕೆ ಟೈಕ್ಸ್, ಗ್ರಾನೈಟ್ ಅಥವಾ ಏನೇ ಅಳವಡಿಸುವುದಿದ್ದರೂ ಅದು ಕೋಣೆಯ ಸುತ್ತಲು ಬೆಳಕನ್ನು ಪ್ರತಿಬಿಂಬಿಸುವಂತೆ ಇರಲಿ.
ಕೋಣೆಯೊಳಗೆ ನೈಸರ್ಗಿಕ ಬೆಳಕು ಪ್ರತಿಬಿಂಬಿಸಲು ಕನ್ನಡಿಗಳನ್ನು ಕಿಟಕಿಗಳ ಎದುರು ಇರಿಸಿ. ಅದು ಕೊಠಡಿಯು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ.
ಗೋಡೆ ಅಥವಾ ಕಪಾಟುಗಳ ಮೇಲಿನ ಲಂಬವಾಗಿ ಪಟ್ಟಿಗಳ ರಚನೆ ಮಾಡಿಸಿ. ಇದು ಮನೆಯ ಗೋಡೆ ಎತ್ತರವಾಗಿರುವ ಭ್ರಮೆ ಮೂಡಿಸುತ್ತದೆ. ಕೋಣೆ ವಿಸ್ತಾರವಾಗಿರುವ ಭಾವ ಕೊಡುತ್ತದೆ.
All photos: Pexels
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ