ಕುಡಿಯೋದು ಬಿಡಬೇಕು ಅಂದ್ಕೊಂಡ್ರೆ ಈ 7 ಕಾರಣಗಳು ನಿಮಗೆ ಆಸರೆ ಆಗುತ್ವೆ
By Jayaraj
Sep 07, 2024
Hindustan Times
Kannada
ಆಲ್ಕೋಹಾಲ್ ಅಮಲೇರಿಸುವ ರಾಸಾಯನಿಕವಾಗಿದ್ದು, ಅತಿಯಾಗಿ ಮದ್ಯ ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ.
ಅತಿಯಾಗಿ ಮದ್ಯ ಸೇವನೆಯಿಂದ ದೇಹದ ಮೇಲೆ ಗಂಭೀರ ಹಾನಿಗಳಾಗುತ್ತವೆ. ಈ ಕಾರಣದಿಂದಾಗಿ ನೀವು ಕುಡಿತ ಬಿಟ್ಟರೆ ಒಳ್ಳೆಯದು.
ಮೆಡಿಕಲ್ ನ್ಯೂಸ್ ಟುಡೇ ವರದಿ ಪ್ರಕಾರ, ಆಲ್ಕೋಹಾಲ್ ಯಕೃತ್ತಿನಲ್ಲಿ ಚಯಾಪಚಯಗೊಳ್ಳುತ್ತದೆ. ಯಕೃತ್ತು ಮದ್ಯವನ್ನು ಅಸಿಟಾಲ್ಡಿಹೈಡ್ ಆಗಿ ಪರಿವರ್ತಿಸುತ್ತದೆ. ಇದು ವಿಷಕಾರಿ ವಸ್ತು.
ಅತಿಯಾಗಿ ಮದ್ಯ ಕುಡಿಯುವುದರಿಂದ ಯಕೃತ್ತಿಗೆ ಗಂಭೀರ ಹಾನಿಯಾಗಬಹುದು ಎಂದು ಮೆಡಿಕಲ್ ನ್ಯೂಸ್ ಟುಡೇ ವರದಿ ಹೇಳಿದೆ.
ಆಲ್ಕೋಹಾಲ್ ಸೇವನೆ ಯಕೃತ್ತಿನಲ್ಲಿ ಕೊಬ್ಬು ರೂಪುಗೊಳ್ಳಲು ಕಾರಣವಾಗಬಹುದು. ಲಿವರ್‌ನಲ್ಲಿ ಊತದ ಸಮಸ್ಯೆಯೂ ಕಾಣಬಹುದು.
ದೀರ್ಘಕಾಲ ಹೆಚ್ಚು ಪ್ರಮಾಣದಲ್ಲಿ ಮದ್ಯ ಕುಡಿಯುವುದರಿಂದ ಪ್ರತಿರಕ್ಷಣಾ ಕೋಶಗಳ ಸಂಖ್ಯೆ ಕಡಿಮೆಯಾಗುತ್ತದೆ. ಸೋಂಕಿನ ಅಪಾಯ ಹೆಚ್ಚಿಸುತ್ತದೆ.
ದೀರ್ಘಕಾಲ ಕುಡಿತದ ಚಟದಿಂದ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯೋಚನಾ ಸಾಮರ್ಥ್ಯ ಕಡಿಮೆಯಾಗುವುದರ ಜೊತೆಗೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ.
ಮದ್ಯಪಾನ ಮೆದುಳನ್ನು ಹೈಪರ್‌ಆಕ್ಟಿವ್ ಮಾಡುತ್ತದೆ. ಹೀಗಾಗಿ ರಸ್ತೆ ಅಪಘಾತಗಳ ಸಾಧ್ಯತೆಯೂ ಹೆಚ್ಚಾಗುತ್ತದೆ.
ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಅಲ್ಸರ್, ಹೊಟ್ಟೆಯ ಗ್ಯಾಸ್ ಸಮಸ್ಯೆ ಮತ್ತು ಕ್ಯಾನ್ಸರ್‌ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಮದ್ಯ ಸೇವನೆಯಿಂದ ರಕ್ತನಾಳಗಳು ಕುಗ್ಗುತ್ತವೆ. ಇದು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸಲು ಕಾರಣವಾಗಬಹುದು.
All Photos: Pexels
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ