ಆರೋಗ್ಯಕರ ಜೀವನಕ್ಕಾಗಿ ಪುರುಷರು ಸೇವಿಸಬೇಕಾದ ಆಹಾರಗಳಿವು
By Jayaraj
Sep 30, 2024
Hindustan Times
Kannada
ಆರೋಗ್ಯಕರ ಜೀವನಕ್ಕಾಗಿ ಪುರುಷರು ಕೆಲವೊಂದು ಆಹಾರಗಳನ್ನು ಸೇವಿಸಿದರೆ ಉತ್ತಮ. ಅವುಗಳ ವಿವಿರ ಇಲ್ಲಿದೆ.
ಹೃದಯದ ಆರೋಗ್ಯಕ್ಕಾಗಿ ಒಮೆಗಾ -3ರಿಂದ ಸಮೃದ್ಧವಾಗಿರುವ ಕೊಬ್ಬಿನ ಮೀನುಗಳು ಉತ್ತಮ.
ಇದರೊಂದಿಗೆ ಆವಕಾಡೊ, ಬಾದಾಮಿ, ವಾಲ್‌ನಟ್ಸ್, ಆಲಿವ್ ಎಣ್ಣೆ ಕೂಡಾ ಹೃದಯದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು
ದೇಹದಲ್ಲಿ ಶಕ್ತಿ ಹೆಚ್ಚಲು ಪ್ರೋಟೀನ್ ಹಾಗೂ ವಿಟಮಿನ್ ಡಿ ಇರುವ ಮೊಟ್ಟೆ, ಕಬ್ಬಿಣ ಹಾಗೂ ಮೆಗ್ನೀಸಿಯಮ್ ಅಂಶವಿರು ಪಾಲಕ್, ಗೆಣಸು ಸೇವಿಸಬೇಕು.
ಮೂಳೆ ಆರೋಗ್ಯಕ್ಕಾಗಿ ಡೈರಿ ಉತ್ಪನ್ನಗಳಾದ ಹಾಲು, ಚೀಸ್ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಇರುತ್ತದೆ. ಮೀನು, ಧಾನ್ಯಗಳು ಬಾದಾಮಿ ಕೂಡಾ ಬೇಕು.
ಅರಿವಿನ ಕಾರ್ಯ ಸುಧಾರಿಸಲು ನಟ್ಸ್, ಬೆರಿಹಣ್ಣು, ಸ್ಟ್ರಾಬೆರಿ, ಡಾರ್ಕ್ ಚಾಕೊಲೇಟ್ ಒಳ್ಳೆಯದು.
ಕ್ಯಾನ್ಸರ್ ತಡೆಗಟ್ಟುವ ಸಲುವಾಗಿ ಹೂಕೋಸು, ಬ್ರಕೋಲಿ, ಟೊಮ್ಯಾಟೊ, ಅಣಬೆ, ಗ್ರೀನ್ ಟೀ ಸೇವಿಸಬಹುದು.
ಉಳಿದಂತೆ ಪಾಲಕ್‌ನಂಥ ಹಸಿರು ತರಕಾರಿ, ದ್ವಿದಳ ಧಾನ್ಯಗಳು, ಸೇಬು, ಬಾಳೆಹಣ್ಣು, ಮೊಸರು ನಿಯಮಿತವಾಗಿ ಸೇವಿಸಿದರೆ ಪುರುಷರ ಆರೋಗ್ಯಕ್ಕೆ ಒಳ್ಳೆಯದು.
All photos: Pexels
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ